Wednesday, September 22, 2021
Homeದೇಶಛತ್ತೀಸ್ ಗಢದಲ್ಲಿ ಕೆಂಪು ಉಗ್ರರ ಅಟ್ಟಹಾಸ –ಬಿಜೆಪಿ ಶಾಸಕ, ಐವರು ಪೊಲೀಸರು ಬಲಿ

ಇದೀಗ ಬಂದ ಸುದ್ದಿ

ಛತ್ತೀಸ್ ಗಢದಲ್ಲಿ ಕೆಂಪು ಉಗ್ರರ ಅಟ್ಟಹಾಸ –ಬಿಜೆಪಿ ಶಾಸಕ, ಐವರು ಪೊಲೀಸರು ಬಲಿ

ಛತ್ತೀಸ್‌ಗಢದ ದಾಂತೇವಾಡದಲ್ಲಿ ನಕ್ಸಲರು IED ಬಾಂಬ್‌ ಬ್ಲಾಸ್ಟ್‌ ಮಾಡುವ ಮೂಲಕ ಅಟ್ಟಹಾಸ ಮೆರೆದಿದ್ದಾರೆ. ಬಿಜೆಪಿ ಶಾಸಕ ಭೀಮಾ ಮಾಂಡವಿ ಮತ್ತು ನಕ್ಸಲ್‌ ನಿಗ್ರಹ ಕಾರ್ಯಾಚರಣೆ ದಳದ ಡಿಐಜಿ ಪಿ ಸುಂದರ್‌ ರಾಜ್‌ ಸಹಿತ ಐವರು ಪೊಲೀಸರನ್ನು ಬಲಿ ಪಡೆದಿದ್ದಾರೆ.

ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಕೇವಲ 36 ತಾಸುಗಳು ಬಾಕಿ ಉಳಿದಿರುವಂತೆ ನಕ್ಸಲರು ಆರು ಜೀವಗಳನ್ನು ಬಲಿಪಡೆದಿದ್ದಾರೆ. ಐಇಡಿ ಬಾಂಬ್‌ ಗಳನ್ನು ರಸ್ತೆಯಲ್ಲಿ ಹುಗಿದಿರಿಸಲಾಗಿತ್ತು.

ನಕ್ಸಲ್​ಪೀಡಿತ ಪ್ರದೇಶದಲ್ಲಿ ಬಿಗಿ ಭದ್ರತೆಯೊಂದಿಗೆ ಚುನಾವಣಾ ಪ್ರಚಾರಕ್ಕಾಗಿ ಭೀಮಾ ಮಾಂಡವಿ ತೆರಳುತ್ತಿದ್ದಾಗ, ನಕ್ಸಲರು ಸುಧಾರಿತ ಸ್ಫೋಟಕ ಬಳಸಿ ದಾಳಿ ನಡೆಸಿದ್ದಾರೆ. ನಕ್ಸಲರು ಸುಧಾರಿತ ಸ್ಫೋಟಕ ಸಿಡಿಸುತ್ತಿದ್ದಂತೆ ಶಾಸಕ ಭೀಮಾ ಮಾಂಡವಿ ಇದ್ದ ಎಸ್​ಯುವಿ ವಾಹನ ಗಾಳಿಯಲ್ಲಿ ಮೇಲೆ ಹಾರಿ ಪುಡಿ ಪುಡಿಯಾಯಿತು ಎನ್ನಲಾಗಿದೆ. 

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img