Thursday, September 23, 2021
Homeಜಿಲ್ಲೆಮದ್ಯದ ದೊರೆ ಮಲ್ಯಗೆ ಮತ್ತೆ ಹಿನ್ನಡೆ

ಇದೀಗ ಬಂದ ಸುದ್ದಿ

ಮದ್ಯದ ದೊರೆ ಮಲ್ಯಗೆ ಮತ್ತೆ ಹಿನ್ನಡೆ

ಭಾರತಕ್ಕೆ ಗಡಿಪಾರು ಮಾಡುವ ಆದೇಶದ ವಿರುದ್ಧ ವಿಜಯ್​​ ಮಲ್ಯ ಸಲ್ಲಿಸಿದ್ದ  ಅರ್ಜಿಯನ್ನು ಇಂಗ್ಲೆಂಡ್​​ ಹೈಕೋರ್ಟ್​​ ವಜಾಗೊಳಿಸಿದೆ. ಈ ಮೂಲಕ ವಿಜಯ್​ ಮಲ್ಯಗೆ ಮತ್ತೆ ಹಿನ್ನಡೆಯಾಗಿದೆ. ಭಾರತದ ರಾಷ್ಟ್ರೀಯ ಬ್ಯಾಂಕ್​​ಗಳಲ್ಲಿ 9 ಸಾವಿರ ಕೋಟಿ ರೂಪಾಯಿ ಸಾಲ ಪಡೆದು ವಂಚನೆ ಎಸಗಿದ ಪ್ರಕರಣ ಸಂಬಂಧ ಮಲ್ಯನನ್ನು ಭಾರತಕ್ಕೆ ಹಸ್ತಾಂತರಿಸಲು ವೆಸ್ಟ್​​ಮಿನಿಸ್ಟರ್​​ ಮ್ಯಾಜಿಸ್ಟ್ರೇಟ್​​ ಕೋರ್ಟ್​ ಆದೇಶಿಸಿತ್ತು. ಇದನ್ನು ಪ್ರಶ್ನಿಸಲು ಅನುಮತಿ ಕೋರಿ ಮಲ್ಯ ಲಿಖಿತ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಜಸ್ಟಿಸ್​​ ವಿಲಿಯಮ್ ಡೇವಿಸ್ ​ ತಿರಸ್ಕರಿಸಿದ್ದಾರೆ. ಈಗ ಮಲ್ಯಗೆ ಮೌಖಿಕ ವಿಚಾರಣೆಗೆ ಅರ್ಜಿ ಸಲ್ಲಿಸಲು 5 ದಿನಗಳ ಅವಕಾಶವಿದೆ.  ಲಿಖಿತ ಅರ್ಜಿ ತಿರಸ್ಕೃತವಾಗಿದ್ದು, ಮಲ್ಯಗೆ ಮತ್ತೊಮ್ಮೆ ರಿನೀವಲ್​​​ ಸಲ್ಲಿಸುವ ಅವಕಾಶವಿದೆ. ಇದರಿಂದ ಮಲ್ಯ ಮೌಖಿಕ ವಿಚಾರಣೆ ಎದುರಿಸಬೇಕಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img