ಬಿಜೆಪಿ ಪ್ರಣಾಳಿಕೆಯನ್ನ ನವದೆಹಲಿಯಲ್ಲಿ ಪ್ರಧಾನಿ ಮೋದಿ, ಬಿಜೆಪಿ ರಾಷ್ಚ್ರೀಯ ಅಧ್ಯಕ್ಷ ಅಮಿತ್ ಶಾ ಬಿಡುಗಡೆ ಮಾಡಿದ್ರು. ಸಂಕಲ್ಪ್ ಪತ್ರ ಹೆಸರಿನ 48 ಪುಟಗಳ ಪ್ರಣಾಳಿಕೆಯನ್ನ ಬಿಜೆಪಿ ಮುಖಂಡರು ರಿಲೀಸ್ ಮಾಡಿದ್ದಾರೆ. ಪ್ರಣಾಳಿಕೆಯ ಪ್ರಮುಖ ಅಂಶಗಳು ಈ ಕೆಳಗಿನಂತಿವೆ.

60 ವರ್ಷ ಮೇಲ್ಪಟ್ಟ ರೈತರಿಗೆ ಪಿಂಚಣಿ ಯೋಜನೆ
ನವಭಾರತ ನಿರ್ಮಾಣಕ್ಕೆ 75 ಭರವಸೆ ನೀಡಿದ ಬಿಜೆಪಿ
ರಕ್ಷಣಾ ಕ್ಷೇತ್ರದಲ್ಲಿ ಸಂಪೂರ್ಣ ಸ್ವಾವಲಂಬನೆ
ರಾಮಮಂದಿರ ನಿರ್ಮಾಣಕ್ಕೆ ಎಲ್ಲಾ ಪ್ರಯತ್ನ
ರಾಷ್ಟ್ರೀಯ ವ್ಯಾಪಾರ ಆಯೋಗ ರಚನೆ
ದೇಶ ಮೊದಲು ಉತ್ತಮ ಆಡಳಿತವೇ ಬಿಜೆಪಿ ಗುರಿ
ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ
ಎಲ್ಲರಿಗೂ ಶಿಕ್ಷಣದ ಗುರಿ
ಎಲ್ಲರಿಗೂ ಸ್ವಂತ ಮನೆ, ಅಡುಗೆ ಸಿಲಿಂಡರ್ ನೀಡುವುದು
60 ಸಾವಿರ ಕೀ. ಮೀ ರಾಷ್ಚ್ರೀಯ ಹೆದ್ದಾರಿ ನಿರ್ಮಾಣ
ಬೇನಾಮಿ ಆಸ್ತಿ ಹೊಂದಿದವರ ವಿರುದ್ಧ ಕಠಿಣ ಕ್ರಮ
ಆರ್ಟಿಕಲ್ 370, 35 (A) ರದ್ದು
5 ಕೀ ದೂರದಲ್ಲಿ ಒಂದು ಬ್ಯಾಂಕ್ ಶಾಖಾ ವ್ಯವಸ್ಥೆ
ರೈತರಿಗೆ ಬಡ್ಡಿ ರಹಿತ ಕ್ರೆಡಿಟ್ ಕಾರ್ಡ್ ಯೋಜನೆ