Wednesday, September 22, 2021
Homeರಾಜಕೀಯಮೋದಿ ಪ್ರಧಾನಿಯಾಗಲ್ವಾ ?- ಯುಗಾದಿಯಂದು ನುಡಿದ ಆ ಫಲಭವಿಷ್ಯವೇನು?

ಇದೀಗ ಬಂದ ಸುದ್ದಿ

ಮೋದಿ ಪ್ರಧಾನಿಯಾಗಲ್ವಾ ?- ಯುಗಾದಿಯಂದು ನುಡಿದ ಆ ಫಲಭವಿಷ್ಯವೇನು?

ಬಾಗಲಕೋಟೆ : ನರೇಂದ್ರ ಮೋದಿ  ಮತ್ತು  ರಾಹುಲ ಗಾಂಧಿ ಇಬ್ಬರೂ ಪ್ರಧಾನಮಂತ್ರಿ ಆಗಲ್ವಂತೆ. ಇಂತಹದ್ದೊಂದು ಭವಿಷ್ಯ ಯುಗಾದಿಯಂದು ಹೊರಬಿದ್ದಿದೆ. ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಇಬ್ಬರೂ ಪ್ರಧಾನಮಂತ್ರಿ ಪಟ್ಟಕ್ಕೆ ಏರುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಬಾಗಲಕೋಟ ಜಿಲ್ಲೆಯ ಗುಳೇದ ಗುಡ್ಡದ ಇಲಾಳ ಮ್ಯಾಳದ ಮಲ್ಲಿಕಾರ್ಜುನ ಗೊಬ್ಬಿ ಸಾಂಪ್ರದಾಯಿಕ ಫಲ ಭವಿಷ್ಯ ನುಡಿದಿದ್ದಾರೆ.

ಯುಗಾದಿಯಂದು ಇವರು ಈ ವರ್ಷದ ಮಳೆ, ಬೆಳೆ, ವ್ಯಾಪಾರ ವಹಿವಾಟು, ರಾಜಕೀಯ ಕ್ಷೇತ್ರದ ಕುರಿತು ಭವಿಷ್ಯ ನುಡಿಯುತ್ತಾರೆ. ಅದರಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಧಾನಿ ಯೋಗ ಶೇ.67 ಇದ್ದರೆ, ರಾಹುಲ್​ ಗಾಂಧಿಗೆ ಶೇ.46 ಅವಕಾಶವಿದೆ. ಅಧಿಕಾರದ ಅವಕಾಶವಿದ್ದರೂ ಇಬ್ಬರಿಗೂ ಪ್ರಧಾನಿ ಆಗುವ ಯೋಗ ಕಡಿಮೆ ಇದೆ ಎಂದು ಮಲ್ಲಿಕಾರ್ಜುನ ಗೊಬ್ಬಿ ತಿಳಿಸಿದ್ದಾರೆ.

ಏಳು ಹಂತದ ಮತದಾನವಿದೆ. ಇದರಲ್ಲಿ ಒಂದರಿಂದ ನಾಲ್ಕು ಹಂತದವರೆಗೆ ಮತದಾನ ಸುಗಮವಾಗಿ ಸಾಗುತ್ತದೆ. ಐದು,ಆರು ಮತ್ತು ಏಳನೇ ಹಂತದ ಮತದಾನಗಳು ಕೆಟ್ಟ ಘಳಿಗೆಯನ್ನು ಎದುರಿಸಬೇಕಾಗುತ್ತದೆ. ಸಂಸದರು ತಮ್ಮ ವೈಯಕ್ತಿಕ ನಿರ್ಧಾರ ತೆಗೆದುಕೊಳ್ಳುತ್ತಾರೆ. ಯಾರೂ ಯಾರ ಮಾತು ಕೇಳುವ ಸ್ಥಿತಿಯಲ್ಲಿ ಇರುವುದಿಲ್ಲ ಎಂದು ಗೊಬ್ಬಿ ಭವಿಷ್ಯ ನುಡಿದಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img