Sunday, September 19, 2021
Homeರಾಜಕೀಯಮಂಡ್ಯದಲ್ಲಿ ಮೈತ್ರಿ ಬಿಕ್ಕಟ್ಟು –ಸಿದ್ದು ಸಂಧಾನ ಸಭೆ ವಿಫಲ

ಇದೀಗ ಬಂದ ಸುದ್ದಿ

ಮಂಡ್ಯದಲ್ಲಿ ಮೈತ್ರಿ ಬಿಕ್ಕಟ್ಟು –ಸಿದ್ದು ಸಂಧಾನ ಸಭೆ ವಿಫಲ

ಮಂಡ್ಯ ಕಾಂಗ್ರೆಸ್ ಮುಖಂಡರ ಜೊತೆ ಮಾಜಿ ಸಿಎಂ ಸಿದ್ದರಾಮಯ್ಯ ನಡೆಸಿದ ಸಂಧಾನ ಸಭೆ ವಿಫಲವಾಗಿದೆ. ನಾಳೆ ಮತ್ತೊಂದು ಸುತ್ತಿನ ಸಭೆ ನಡೆಸಲು ನಿರ್ಧಾರ ಮಾಡಲಾಗಿದೆ.

ಸಭೆಯಲ್ಲಿ, ಸಿಎಂ ಪದೇ ಪದೇ ನಮ್ಮನ್ನ ಟಾರ್ಗೆಟ್ ಮಾಡ್ತಾರೆ. ಬೆನ್ನಿಗೆ ಚೂರಿ ಹಾಕುವವರು ಅಂತ ಹೇಳ್ತಾರೆ. ಈ ರೀತಿ ನಮ್ಮನ್ನ ಪದೇ ಪದೇ ಅವಮಾನಿಸಿದರೆ ಹೇಗೆ. ಅವರಿಗೆ ನಮ್ಮ‌ ಮೇಲೆ ನಂಬಿಕೆಯಿಲ್ಲವಾಗಿದೆ. ಹೀಗಿದ್ದಾಗ ನಾವು ಯಾವ ಮುಖವಿಟ್ಟುಕೊಂಡು ಕೆಲಸ ಮಾಡಬೇಕು. ನಾವೇ ಮೇಲೆ ಬಿದ್ದು ಯಾಕೆ ಪ್ರಚಾರ ಮಾಡಬೇಕು. ಈಗ ಕಷ್ಟಪಟ್ಟು ಕೆಲಸ ಮಾಡ್ತೇವೆ. ಚುನಾವಣೆಯಲ್ಲಿ ಗೆದ್ದ ಮೇಲೆ ಕುಮಾರಸ್ವಾಮಿ ನಮ್ಮನ್ನ ಪರಿಗಣಿಸ್ತಾರಾ..? ಕಾಂಗ್ರೆಸ್​ನವರು ನಮ್ಮ ಪರವಾಗಿಯೇನೂ ಕೆಲಸ ಮಾಡಿಲ್ಲ. ನಮ್ಮನ್ನ ಜನ ಆರಿಸಿಕಳಿಸಿದ್ದಾರೆ ಅಂತ ಕೊನೇಲಿ ನಮ್ಮ ಮೇಲೇ ಗೂಬೆ ಕೂರಿಸ್ತಾರೆ. ಇದಕ್ಕೆ ನಾವೇಕೆ ಕೆಲಸ ಮಾಡಬೇಕು ಅಂತಾ ಮಾಜಿ ಸಚಿವ ಚೆಲುವರಾಯಸ್ವಾಮಿ, ಸಿದ್ದರಾಮಯ್ಯ ಎದುರು ಸಮಸ್ಯೆ ತೋಡಿಕೊಂಡಿದ್ದಾರೆ.

ಮಂಡ್ಯದಲ್ಲಿ ಕೈ ಕಾರ್ಯಕರ್ತರು ಹಾಗೂ ಮಂಡ್ಯ ನಾಯಕರು ಮೈತ್ರಿ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿಗೆ ಸಪೋರ್ಟ್​ ನೀಡುತ್ತಿಲ್ಲ ಅಂತಾ ಆರೋಪ ಕೇಳಿಬಂದಿತ್ತು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img