Sunday, September 19, 2021
Homeಜಿಲ್ಲೆಚಿಕ್ಕಬಳ್ಳಾಪುರಲಾರಿ ಹರಿದು ವ್ಯಕ್ತಿ ಸಾವು, ಮೊತ್ತೊಬ್ಬರ ಸ್ಥಿತಿ ಗಂಭೀರ

ಇದೀಗ ಬಂದ ಸುದ್ದಿ

ಲಾರಿ ಹರಿದು ವ್ಯಕ್ತಿ ಸಾವು, ಮೊತ್ತೊಬ್ಬರ ಸ್ಥಿತಿ ಗಂಭೀರ

ಶಿಡ್ಲಘಟ್ಟ :ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ  ಪಟ್ಟಣದ ದಿಬ್ಬೂರಳ್ಳಿ ಮುಖ್ಯ ರಸ್ತೆಯಲ್ಲಿ ಬೋರ್ವೆಲ್  ಲಾರಿ ಹರಿದು ಸ್ಥಳದಲ್ಲೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.  ಬೆಳಗ್ಗೆ 9 ಗಂಟೆಗೆ  ಗಂಡ ಹೆಂಡತಿ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವಾಗ ದುರ್ಘಟನೆ ನಡೆದಿದೆ.  ನಗರದ 1ನೇ ಕಾರ್ಮಿಕ ನಗರದ ಮಿಟಾಯಿ ಅಮಾನು (50 ) ವ್ಯಕ್ತಿ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.  ರಸ್ತೆ ತಿರುವು ಪಡೆದು ಮುಖ್ಯ ರಸ್ತೆಗೆ ಬಂದ ಸಂದರ್ಭದಲ್ಲಿ ಲಾರಿ ಹರಿದಿದೆ.

ಹಿಂಬದಿ ಕುಳಿತಿದ್ದ ಅವರ ಪತ್ನಿ ತೀವ್ರ ಅಸ್ವಸ್ಥಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳದಲ್ಲಿ ಒಂದು ಹೆಣ್ಣು ಮಗಳು ಮತ್ತು ಎರಡನೇ ಹೆಂಡತಿಯ  ಆಕ್ರಂದನ ಮುಗಿಲು ಮುಟ್ಟಿತ್ತು. ನಗರ ಹಾಗೂ ಹೊರವಲಯಗಳ ರಸ್ತೆಗಳೆಲ್ಲಾ ಹೊಸ  ಡಾಂಬರೀಕರಣ ಹಾಕಿದ ಪ್ರಭಾವ ಅಪಘಾತಗಳು ಸಂಭವಿಸುತ್ತಿದ್ದು, ಸೂಕ್ತ ಕ್ರಮಕೈಗೊಳ್ಳಲು ಸಾರ್ವಜನಿಕರು ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img