Thursday, September 23, 2021
HomeಸಿನಿಮಾHappy Birthday Dear Lilly – ರಶ್ಮಿಕಾಗೆ ವಿಜಯ್ ದೇವರಕೊಂಡ ಗಿಫ್ಟ್ !

ಇದೀಗ ಬಂದ ಸುದ್ದಿ

Happy Birthday Dear Lilly – ರಶ್ಮಿಕಾಗೆ ವಿಜಯ್ ದೇವರಕೊಂಡ ಗಿಫ್ಟ್ !

ಕನ್ನಡದ ಕಿರಿಕ್​ ಬ್ಯೂಟಿ ರಶ್ಮಿಕಾ ಈಗ ಲಿಲ್ಲಿ. ನಟ ವಿಜಯ್​ ದೇವರಕೊಂಡ ರಶ್ಮಿಕಾರನ್ನು ಡಿಯರ್ ಲಿಲ್ಲಿ ಎಂದು ಬರೆದಿರುವ ಟ್ವೀಟ್​ ವೈರಲ್​ ಆಗಿದೆ.  ಇಂದು ರಶ್ಮಿಕಾ ಹುಟ್ಟುಹಬ್ಬ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ರಶ್ಮಿಕಾಗೆ ಶುಭಾಷಯಗಳ ಮಹಾಪೂರವೇ ಹರಿದು ಬರುತ್ತಿದೆ.

ತೆಲುಗು ನಟ ವಿಜಯ್ ದೇವರ ಕೊಂಡ Happy Birthday Dear Lilly ಅಂತ ಟ್ವೀಟ್ ಮಾಡಿದ್ದಾರೆ. 

ಅಷ್ಟೇ ಅಲ್ಲ ವಿಜಯ್​ ದೇವರಕೊಂಡ ಹಾಗೂ ಅವರ ‘ಡಿಯರ್​ ಕಾಮ್ರೆಡ್​’ ಸಿನಿ ತಂಡವರು ರಶ್ಮಿಕಾ ಹುಟ್ಟುಹಬ್ಬಕ್ಕೆ ಒಂದು ವಿಶೇಷವಾದ ಉಡುಗೊರೆ ಕೊಡಲು ನಿರ್ಧರಿಸಿದ್ದಾರೆ. ‘ಈ ಚಿತ್ರದ ಮೊದಲ ಹಾಡನ್ನು ರಶ್ಮಿಕಾ ಹುಟ್ಟುಹಬ್ಬಕ್ಕೆ ಸಮರ್ಪಿಸಲಾಗುವುದು. ಈ ಹಾಡನ್ನು ಇದೇ ತಿಂಗಳ 8ರಂದು ಬೆಳಿಗ್ಗೆ 11.11ಕ್ಕೆ ಬಿಡುಗಡೆ ಮಾಡಲಾಗುವುದು’ ಎಂದು ವಿಜಯ್​ ದೇವರಕೊಂಡ ಟ್ವೀಟ್​ ಮಾಡಿದ್ದಾರೆ.

ವಿಷ್ಯ ಏನಪ್ಪಾ ಅಂದ್ರೆ ಈಗ ರಶ್ಮಿಕಾ ಹೆಸರು ಲಿಲ್ಲಿ ಅಂತೆ. ಅದು ವಿಜಯ್ ದೇವರಕೊಂಡ ಕೊಟ್ಟಿರುವುದಲ್ಲ. ಆದರೆ ‘ಡಿಯರ್​ ಕಾಮ್ರೆಡ್’ ಸಿನಿಮಾದಲ್ಲಿ ರಶ್ಮಿಕಾ ಪಾತ್ರದ ಹೆಸರು ಲಿಲ್ಲಿ. ಅದಕ್ಕಾಗಿಯೇ ಈಗ ಕೊಡಗಿನ ಬೆಡಗಿ ರಶ್ಮಿಕಾಳನ್ನ ಲಿಲ್ಲಿ ಅಂತ ಕರೆದಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ  ಡಿಯರ್ ಕಾಮ್ರೆಡ್ ಚಿತ್ರದಲ್ಲಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಲಿಪ್ ಲಾಕ್ ದೃಶ್ಯ ಭಾರಿ ಸದ್ದು ಮಾಡಿತ್ತು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img