Wednesday, September 22, 2021
Homeಜಿಲ್ಲೆಮೈಸೂರುಮೈಸೂರು ಜೆಡಿಎಸ್ ಸಭೆಯಲ್ಲಿ ಗದ್ದಲ –ಮೋದಿಗೆ ಜೈ ಎಂದ ಕಾರ್ಯಕರ್ತರು

ಇದೀಗ ಬಂದ ಸುದ್ದಿ

ಮೈಸೂರು ಜೆಡಿಎಸ್ ಸಭೆಯಲ್ಲಿ ಗದ್ದಲ –ಮೋದಿಗೆ ಜೈ ಎಂದ ಕಾರ್ಯಕರ್ತರು

ಮೈಸೂರು: ಮೈಸೂರಿನ ಖಾಸಗಿ ಹೋಟೆಲ್​ನಲ್ಲಿ ನಡೆಯುತ್ತಿರುವ ಜೆಡಿಎಸ್​ ಕಾರ್ಯಕರ್ತರ ಸಭೆಯಲ್ಲಿ ಜೆಡಿಎಸ್​ ಕಾರ್ಯಕರ್ತರು ಸಚಿವ ಜಿ.ಟಿ ದೇವೇಗೌಡ ಎದುರಲ್ಲೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಪರಿಷತ್ ಸದಸ್ಯ ಮರಿತಿಬ್ಬೆಗೌಡ ಮಾತನಾಡುತ್ತಿದ್ದಾಗ ಏಕಾಏಕಿ ಗಲಾಟೆ ನಡೆಸಿದ್ದಾರೆ. ನೀವು ಈಗ ಮೈತ್ರಿ ಅಂತಿದ್ದೀರಾ ಕಳೆದ ಚುನಾವಣೆಲ್ಲಿ ಕೇಸ್​ಗಳು ಮಾಡಿಸಿಕೊಂಡಿದ್ದು ನಾವು.. ಈಗ ಮೈತ್ರಿ ಅಂದ್ರೆ ಹೇಗೆ ಎಂದು ವಾಗ್ದಾಳಿ ನಡೆಸಿದ್ದಾರೆ.  ಇದೇ ವೇಳೆ ಕೆಲ ಜೆಡಿಎಸ್ ಕಾರ್ಯಕರ್ತರು ಬಿಜೆಪಿಗೆ, ನರೇಂದ್ರ ಮೋದಿಗೆ ಜೈ ಎಂದು ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಸಿದ್ದರಾಮಯ್ಯ ಬರಬೇಕು,  ಬಂದು ಮತ ಕೇಳಲಿ ಆಮೇಲೆ ನೋಡ್ತೀವಿ ಎಂದು  ಸವಾಲು ಹಾಕಿದ್ದಾರೆ. ಇನ್ನು ಗಲಾಟೆ ಹೆಚ್ಚಾಗುತ್ತಿದ್ದಂತೆ ವೇದಿಕೆ ಬಿಟ್ಟು ಕೆಳಗಿಳಿದ ಸಚಿವ ಜಿಟಿಡಿ, ಕಾರ್ಯಕರ್ತರ ಸಮಾಧಾನ ಮಾಡಲು ಪ್ರಯತ್ನಿಸಿದ್ರು.

ಈ ಬೆಳವಣಿಗೆಗಳು ಸಿದ್ದರಾಮಯ್ಯನವರಿಗೆ ತವರು ಮೈಸೂರಿನಲ್ಲಿ ಮತ್ತಷ್ಟು ಹಿನ್ನಡೆ ಉಂಟುಮಾಡಲಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img