Wednesday, September 22, 2021
Homeಜಿಲ್ಲೆಬೆಂಗಳೂರುಬಿಜೆಪಿಗೆ ಜೈ ಎಂದ ತೆನೆ ಹೊತ್ತ ಸಹೋದರರು !

ಇದೀಗ ಬಂದ ಸುದ್ದಿ

ಬಿಜೆಪಿಗೆ ಜೈ ಎಂದ ತೆನೆ ಹೊತ್ತ ಸಹೋದರರು !

ಚುನಾವಣೆ ಹತ್ತಿರ ಬರುತ್ತಿದ್ದಂತೆ ಪಕ್ಷಾಂತರ ಪರ್ವ ಜೋರಾಗಿದ್ದು, ಇದೀಗ ತೆನೆ ಹೊತ್ತ ಸಹೋದರರು ಕಮಲ ಹಿಡಿದಿದ್ದಾರೆ. ಜೆಡಿಎಸ್’ನಲ್ಲಿದ್ದ ಎಂ.ಬಿ ನರಸಿಂಹ ಮೂರ್ತಿ ಹಾಗೂ ಎಂ.ಬಿ ಮುರಳಿ ಮೈತ್ರಿ ಸರ್ಕಾರದಲ್ಲಿ ತಮ್ಮದೇನು ನಡೆಯಲ್ಲ ಎಂಬುದು ಖಚಿತವಾಗುತ್ತಿದ್ದಂತೆ ಪಕ್ಷ ತೊರೆದಿದ್ದಾರೆ.

ಎಸ್.. ನಿನ್ನೆ ರಾತ್ರೋ ರಾತ್ರಿ ಎಂ.ಬಿ ನರಸಿಂಹ ಮೂರ್ತಿ ಹಾಗೂ ಎಂ.ಬಿ ಮುರಳಿ ಜೆಡಿಎಸ್ ಬಿಟ್ಟು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಮುಖಂಡ, ಮಾಚೋಹಳ್ಳಿ ಗ್ರಾಂ. ಪಂ ಸದಸ್ಯ ಎಂ.ಬಿ ರಾಮಕೃಷ್ಣಯ್ಯ ಅವರು ಈ ಇಬ್ಬರು ಸಹೋದರರ ಜೊತೆ ಕೈ ಜೋಡಿಸಿ ತಮ್ಮ ಪಕ್ಷಕ್ಕೆ ಸೆಳೆದುಕೊಂಡಿದ್ದಾರೆ.

ಇಷ್ಟು ದಿನಗಳ ಕಾಲ ಜೆಡಿಎಸ್ ಪಕ್ಷದಲ್ಲಿ ಎಂ.ಬಿ ನರಸಿಂಹ ಮೂರ್ತಿ ಹಾಗೂ ಎಂ.ಬಿ ಮುರಳಿ ರಾಜರಂತೆ ಇದ್ದರು. ಆದರೆ ಜೆಡಿಎಸ್, ಕಾಂಗ್ರೆಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುತ್ತಿದ್ದಂತೆ ಸಹೋದರರ ಆಟಗಳಿಗೆ ಬ್ರೇಕ್ ಬಿದ್ದಿದೆ. ಹಾಗಾಗಿ ಬೇರೆ ದಾರಿ ಕಾಣದ ಮಂಕಾಗಿದ್ದ ಸಹೋದರರಿಗೆ ರಾಮಕೃಷ್ಣಯ್ಯ ದೇವರಂತೆ ಬಂದು ಬಿಜೆಪಿಯಲ್ಲಿ ಉತ್ತಮ ಸ್ಥಾನಮಾನ ಕೊಡಿಸುವ ಭರವಸೆ ನೀಡುವ ಮೂಲಕ ತಮ್ಮ ಪಕ್ಷಕ್ಕೆ ಬರುವಂತೆ ಆಮಂತ್ರಣ ನೀಡಿದ್ದಾರೆ. ಕಂಗಾಲಾಗಿ ಕೂತಿದ್ದ ಸಹೋದರರಿಗೆ ಈ ಅವಕಾಶ ಮರಳುಗಾಡಿನಲ್ಲಿ ಸಿಕ್ಕ ಓಯಾಸಿಸ್’ನಂತೆ ಕಂಡಿದ್ದು, ರಾತ್ರೋ ರಾತ್ರಿ ಬಿಜೆಪಿಗೆ ಚಂಗನೆ ಹಾರಿದ್ದಾರೆ.

‘ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಒಂದು ಪಕ್ಷದ ಸಂಘಟನೆ ಅಸಾಧ್ಯ. ಆದ್ದರಿಂದ ಜೆಡಿಎಸ್‌ ತೊರೆದು ಬಿಜೆಪಿಗೆ ಸೇರುತ್ತಿದ್ದೇವೆ ಎಂದು ಬಿಜೆಪಿ ಸೇರ್ಪಡೆ ವೇಳೆ ನರಸಿಂಹ ಮೂರ್ತಿ, ಮುರಳಿ  ಇಬ್ಬರು ಹೇಳಿಕೆ ನೀಡಿದ್ದಾರೆ. ಯಲಹಂಕ ವಿಧಾನಸಭೆ ಕ್ಷೇತ್ರದ ಶಾಸಕ ಎಸ್.ಆರ್.ವಿಶ್ವನಾಥ್ ನೇತೃತ್ವದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಒಟ್ನಲ್ಲಿ ರಾಜಕೀಯ ಚದುರಂಗದಾಟದಲ್ಲಿ ಪಕ್ಷದಿಂದ ಪಕ್ಷಕ್ಕೆ ಹಾರುವುದು ಹೊಸತೇನಲ್ಲ ಎಂಬಂತಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img