Thursday, September 23, 2021
Homeಜಿಲ್ಲೆಬೀದರ್ಈಶ್ವರ ಖಂಡ್ರೆಗೆ ನಾಮಪತ್ರ ತಿರಸ್ಕಾರದ ಭೀತಿ...!

ಇದೀಗ ಬಂದ ಸುದ್ದಿ

ಈಶ್ವರ ಖಂಡ್ರೆಗೆ ನಾಮಪತ್ರ ತಿರಸ್ಕಾರದ ಭೀತಿ…!

ಕೆಪಿಸಿಸಿ ಕಾರ್ಯಾಧ್ಯಕ್ಷ, ಮೈತ್ರಿ ಅಭ್ಯರ್ಥಿ ಈಶ್ವರ ಖಂಡ್ರೆಗೆ ನಾಮಪತ್ರ ತಿರಸ್ಕಾರಗೊಳ್ಳುವ ಭೀತಿ ಶುರುವಾಗಿದೆ. ಅವರ ನಾಮಪತ್ರ ತಿರಸ್ಕರಿಸುವಂತೆ ಚುನಾವಣಾ ಆಯೋಗಕ್ಕೆ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ದೂರು ನೀಡಿದ್ದಾರೆ. ಖಂಡ್ರೆ ನಾಮಪತ್ರ ಸಲ್ಲಿಸುವ ವೇಳೆ ತಮ್ಮ ಹೆಸರಿನಲ್ಲಿ ಯಾವುದೇ ಕೃಷಿ ಜಮೀನು ಇಲ್ಲ ಅಂತಾ ತಿಳಿಸಿದ್ದಾರೆ. ಆದರೆ, ಭಾಲ್ಕಿ ನಗರದಲ್ಲಿ ಸರ್ವೆ ನಂ 45/ಇ, 2.12 ಎಕರೆ ಜಮೀನು ಪತ್ನಿ ಜತೆ ಜಂಟಿ ಖಾತೆ ಹೊಂದಿದ್ದಾರೆ. ಇವರು ನಾಮಪತ್ರದಲ್ಲಿ ಕೃಷಿ ಜಮೀನು ಇಲ್ಲ ಅಂತಾ ಹೇಳಿದ್ದಾರೆ. ಆದರೆ ಆದಾಯದ ಮೂಲದಲ್ಲಿ ಕೃಷಿ ಎಂದು ತೋರಿಸಿದ್ದಾರೆ. ಹೀಗಾಗಿ ಇವರ ನಾಮಪತ್ರ ತಿರಸ್ಕರಿಸಬೇಕು ಅಂತ ಚುನಾವಣಾ ಆಯೋಗಕ್ಕೆ ಖೂಬಾ ದೂರು ನೀಡಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img