Thursday, September 23, 2021
Homeದೇಶಈಗ ವಯನಾಡಿನಲ್ಲಿ ರಾಹುಲ್ ಗಾಂಧಿ ವಿರುದ್ಧ ಇಬ್ಬರು ರಾಹುಲ್ ಗಾಂಧಿಗಳ ಸ್ಪರ್ಧೆ!

ಇದೀಗ ಬಂದ ಸುದ್ದಿ

ಈಗ ವಯನಾಡಿನಲ್ಲಿ ರಾಹುಲ್ ಗಾಂಧಿ ವಿರುದ್ಧ ಇಬ್ಬರು ರಾಹುಲ್ ಗಾಂಧಿಗಳ ಸ್ಪರ್ಧೆ!

 
ವಯನಾಡ್: ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಅವರ ವಿರುದ್ಧ ಮೂವರು ಸುಮಲತಾ ಎಂಬ ಹೆಸರಿನ ಮಹಿಳೆಯರು ಸ್ಪರ್ಧಿಸಿದ್ದಾರೆ . ಕಾಂಗ್ರೆಸ್ ನಾಯಕರೇ ಜೆಡಿಎಸ್ ಗೆ ಈ ತಂತ್ರ ಸೂಚಿಸಿದ್ದರು ಎನ್ನುವ ಮಾತುಗಳಿವೆ. ಈಗ ಇದೇ  ತಂತ್ರ ಕಾಂಗ್ರೆಸ್ ವಿರುದ್ಧವೇ ಪ್ರಯೋಗವಾಗಿದೆ. ಖುದ್ದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯೇ ಈ ತಂತ್ರದ ಬಿಸಿ ಅನುಭವಿಸ್ತಿದ್ದಾರೆ.
 
ವಯನಾಡಿನಲ್ಲಿ ರಾಹುಲ್ ಗಾಂಧಿ ಹೆಸರಿನ ಮತ್ತೆ ಇಬ್ಬರು ವ್ಯಕ್ತಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಅಮೇಥಿ ಜತೆಗೆ ಕೇರಳದ ವಯನಾಡಿನಿಂದಲೂ ಸ್ಪರ್ಧಿಸುತ್ತಿರುವ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಅವರ ಸಂಕಷ್ಟಗಳಿಗೆ ಕೊನೆ ಮೊದಲಿಲ್ಲದಂತಾಗಿದೆ.
 
ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ವಯನಾಡಿನಿಂದ ಕಣಕ್ಕಿಳಿಯುವುದು ಖಚಿತವಾಗುತ್ತಿದ್ದಂತೆ ಇನ್ನಿಬ್ಬರು ರಾಹುಲ್​ ಗಾಂಧಿಗಳು ಕೂಡ ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದರು. ಅದರಂತೆ ಅವರು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದ ಗುರುವಾರ ಪ್ರತ್ಯೇಕವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಕೇರಳ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿರುವ ಎರುಮೆಲೆ ನಿವಾಸಿ ರಾಹುಲ್​ ಗಾಂಧಿ ಕೆ.ಇ. ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಅಂತೆಯೇ ಅಖಿಲ ಭಾರತ ಮಕ್ಕಳ್​ ಕಚ್ಚಿಯ ರಾಹುಲ್​ ಗಾಂಧಿ ಕೆ. ಎಂಬುವವರೂ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ಇವರನ್ನು ಹೊರತು ಪಡಿಸಿ ಕೆ.ಎಂ. ಶಿವಪ್ರಸಾದ್​ ಗಾಂಧಿ ಎಂಬುವವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಅಂತಿಮವಾಗಿ ವಯನಾಡು ಲೋಕಸಭೆ ಕ್ಷೇತ್ರದಲ್ಲಿ 25 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img