Wednesday, September 22, 2021
Homeಜಿಲ್ಲೆಬೆಳಗಾವಿವಿದ್ಯುತ್ ಶಾಕ್ ಗೆ ಒಂದೇ ಕುಟುಂಬದ ನಾಲ್ವರು ಬಲಿ

ಇದೀಗ ಬಂದ ಸುದ್ದಿ

ವಿದ್ಯುತ್ ಶಾಕ್ ಗೆ ಒಂದೇ ಕುಟುಂಬದ ನಾಲ್ವರು ಬಲಿ

ಬೆಳಗಾವಿಯ ರಾಮದುರ್ಗ ತಾಲೂಕಿನ ಕೆ.ತಿಮ್ಮಾಪುರದಲ್ಲಿ ಹೊಲದಲ್ಲಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದ ಪರಿಣಾಮ ವಿದ್ಯುತ್‌ ಪ್ರವಹಿಸಿ ಒಂದೇ ಕುಟುಂಬ ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ನಿನ್ನೆ ಸಂಜೆ ಗಾಳಿ ಮಳೆ ಸುರಿದಿದ್ದು ಈ ವೇಳೆ ವಿದ್ಯುತ್‌ ತಂತಿ ತುಂಡಾಗಿ ಬಿದ್ದಿದೆ ಎಂದು ಹೇಳಲಾಗಿದೆ. ಹೊಲಕ್ಕೆ ತೆರಳಿದ್ದ ರೇವಪ್ಪಾ ಕಲ್ಲೋಳಿ ಪತ್ನಿ ರತ್ನಾ ಕಲ್ಲೋಳಿ ಮಗ ಸಚಿನ್‌  ಮತ್ತು ಅಣ್ಣನ ಮಗ ಕೃಷ್ಣ  ದಾರುಣವಾಗಿ ಸಾವನ್ನಪ್ಪಿದ್ದಾರೆ.

ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣ ಎಂದು ಆರೋಪಿಸಲಾಗಿದೆ. ಜನರು ಕಂಬಗಳನ್ನು ಸರಿಪಡಿಸಲು ಮನವಿ ಮಾಡಿದರು ಅಸಡ್ಡೆ ತೋರಿದ್ದರು ಎಂದು ಆರೋಪಿಸಲಾಗಿದೆ. ಕಟಕೋಳ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img