Thursday, September 23, 2021
Homeದೇಶಯೋಗಿ ನಾಡಿನಲ್ಲಿ ಬಿಜೆಪಿಗೆ ಭೀಮ ಬಲ –ಘಟಬಂಧನ್ ಉಡೀಸ್

ಇದೀಗ ಬಂದ ಸುದ್ದಿ

ಯೋಗಿ ನಾಡಿನಲ್ಲಿ ಬಿಜೆಪಿಗೆ ಭೀಮ ಬಲ –ಘಟಬಂಧನ್ ಉಡೀಸ್

ಲಕ್ನೋ :ಮಹತ್ವದ ಬೆಳವಣಿಗೆಯೊಂದರಲ್ಲಿ, ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಭೀಮಬಲ ಬಂದಂತಾಗಿದೆ. ಸಣ್ಣ  ಪಕ್ಷವಾದರೂ  ಕನಿಷ್ಟ 26 ಸೀಟುಗಳಲ್ಲಿ 4% ಮತ ಹೊಂದಿರುವ ನಿಶಾದ್ ಪಾರ್ಟಿ ಈಗ ಬಿಜೆಪಿ ಮೈತ್ರಿಕೂಟ ಸೇರಿಕೊಂಡಿದೆ. ಎಸ್ಪಿ-ಬಿಎಸ್ಪಿ ನೇತೃತ್ವದ ಮಹಾಘಟಬಂಧನ್ ನಲ್ಲಿದ್ದ ನಿಶಾದ್ ಪಾರ್ಟಿ, ವಾರದ ಹಿಂದಷ್ಟೇ ಮೈತ್ರಿಕೂಟಕ್ಕೆ ಗುಡ್ ಬೈ  ಹೇಳಿತ್ತು.

ಇದಾಗಿ ಒಂದೇ ವಾರದಲ್ಲಿ ಪಾರ್ಟಿ ಬಿಜೆಪಿಗೆ ಬೆಂಬಲ ಘೋಷಿಸಿದೆ. ಅಂದಹಾಗೆ, ನಿಶಾದ್ ಪಾರ್ಟಿಯ ಸಂಜಯ್  ನಿಶಾದ್ ಸಿಎಂ ಯೋಗಿ ಆದಿತ್ಯನಾಥ್ ಅವರಿಂದ ತೆರವಾಗಿದ್ದ ಗೋರಕ್ ಪುರ ಲೋಕಸಭಾ ಉಪಚುನಾವಣೆ ಗೆದ್ದಿದ್ದರು. ಈ ಮೂಲಕ ಖುದ್ದು  ಯೋಗಿಗೆ ಭಾರೀ ಮುಖಭಂಗ ಉಂಟು ಮಾಡಿದ್ದರು. ಇದೀಗ ಇಡೀ ಪಕ್ಷವೇ ಬಿಜೆಪಿ ಬೆಂಬಲಕ್ಕೆ ನಿಂತಿರುವುದು, ಮಹಾಘಟಬಂಧನ್ ಗೆ ಮರ್ಮಾಘಾತ ಉಂಟುಮಾಡಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img