Wednesday, September 22, 2021
Homeರಾಜಕೀಯತುಮಕೂರಿನಲ್ಲಿ ದೇವೇಗೌಡರಿಗೇ ಬ್ಲ್ಯಾಕ್ ಮೇಲ್ ?

ಇದೀಗ ಬಂದ ಸುದ್ದಿ

ತುಮಕೂರಿನಲ್ಲಿ ದೇವೇಗೌಡರಿಗೇ ಬ್ಲ್ಯಾಕ್ ಮೇಲ್ ?

ತುಮಕೂರು : ಮೈತ್ರಿ ಹೋರಾಟದಲ್ಲಿ ಎಲ್ಲವೂ ಸುಗಮವಾಗಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಇದೀಗ ತುಮಕೂರಿನಲ್ಲೂ ಕಾಂಗ್ರೆಸ್ಸಿಗರ ಅಸಮಾಧಾನ ಬಹಿರಂಗವಾಗತೊಡಗಿದೆ. ಮುದ್ದಹನುಮೇಗೌಡರಿಗೆ ಟಿಕೆಟ್ ತಪ್ಪಿದ್ದರಿಂದ ಬಂಡಾಯವೆದ್ದಿದ್ದ ಮಾಜಿ ಶಾಸಕ ಕೆಎನ್  ರಾಜಣ್ಣ ಅವರ ಪುತ್ರ ಆರ್ ರಾಜೇಂದ್ರ ಈಗ ಅಪಸ್ವರ ಎತ್ತಿದ್ದಾರೆ.

ಕಾಂಗ್ರೆಸ್ ನ ಉಪಾಧ್ಯಕ್ಷರೂ ಆಗಿರುವ ರಾಜೇಂದ್ರ, ದೇವೇಗೌಡರ ಪರ ಹೇಗೆ ಮತಯಾಚಿಸುವುದು ಎಂಬ ಗಂಭೀರ ಪ್ರಶ್ನೆ ಎತ್ತಿದ್ದಾರೆ. ತುಮಕೂರಿನಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಅವರು ಮೈತ್ರಿ  ಅಂದ್ಮೇಲೆ ಎಲ್ಲರಿಗೂ ಒಂದೇ ನ್ಯಾಯ ಇರಬೇಕು. ಮೈಸೂರಿನಲ್ಲಿ ಕಾಂಗ್ರೆಸ್ ಪರ ಸಚಿವ ಜಿ ಟಿ ದೇವೇಗೌಡ ಪ್ರಚಾರ ಮಾಡುತ್ತಿಲ್ಲ. ಅಂದಮೇಲೆ ಇಲ್ಲಿ ನಾವು ಹೇಗೆ  ಜೆಡಿಎಸ್  ಪರ ಪ್ರಚಾರ ನಡೆಸುವುದು ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ಮೈಸೂರಿನಲ್ಲಿ ಕಾಂಗ್ರೆಸ್ ಪರ ಪ್ರಚಾರ ನಡೆಸುವಂತೆ ಜೆಡಿಎಸ್ ಮೇಲೆ ಕೈ ನಾಯಕರು ಒತ್ತಡ ಹೇರಲಾರಂಭಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img