Thursday, September 23, 2021
Homeದೇಶಟಿಕ್ ಟಾಕ್ ಅಪ್ಲಿಕೇಶನ್ ಬ್ಯಾನ್ ಮಾಡಿ – ಕೇಂದ್ರಕ್ಕೆ ಮದ್ರಾಸ್ ಹೈಕೋರ್ಟ್ ಆದೇಶ

ಇದೀಗ ಬಂದ ಸುದ್ದಿ

ಟಿಕ್ ಟಾಕ್ ಅಪ್ಲಿಕೇಶನ್ ಬ್ಯಾನ್ ಮಾಡಿ – ಕೇಂದ್ರಕ್ಕೆ ಮದ್ರಾಸ್ ಹೈಕೋರ್ಟ್ ಆದೇಶ

ಶಾರ್ಟ್ ವಿಡಿಯೋ ಫ್ಲ್ಯಾಟ್‍ಫಾರ್ಮ್ ಟಿಕ್ ಟಾಕ್ ಅಪ್ಲಿಕೇಶನ್ ನಿಷೇಧಿಸುವಂತೆ ಮದ್ರಾಸ್ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ. ಟಿಕ್ ಟಾಕ್‍ನಂತಹ ಆ್ಯಪ್ ಯುವಕರ ಭವಿಷ್ಯ ಹಾಗೂ ಮಕ್ಕಳ ಮನಸ್ಥಿತಿಯನ್ನು ಹಾಳು ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟಿದೆ. ನ್ಯಾ. ಎನ್ ಕಿರುಬಕರನ್ ಹಾಗೂ ನ್ಯಾ. ಎಸ್ ಸುಂದರ್ ಅವರಿದ್ದ ದ್ವಿಸದಸ್ಯ ಪೀಠ ಟಿಕ್ ಟಾಕ್ ವಿಡಿಯೋಗಳನ್ನು ಪ್ರಸಾರ ಮಾಡುವ ಮಾಧ್ಯಮಗಳನ್ನು ನಿಷೇಧಿಸುವಂತೆ ಆದೇಶಿಸಿದೆ. ಮಕ್ಕಳು ಸೈಬರ್ ಸಂತ್ರಸ್ತ್ರರಾಗುವುದನ್ನು ತಪ್ಪಿಸಲು ಅಮೆರಿಕ ಸರ್ಕಾರ ಮಕ್ಕಳ ಆನ್‍ಲೈನ್ ಗೌಪ್ಯತೆ ರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದಿದೆ. ಇದೇ ರೀತಿಯಲ್ಲಿ ಕೇಂದ್ರ ಸರ್ಕಾರ ಕಾನೂನು ರೂಪಿಸಬೇಕು ಎಂದು ಪೀಠ ಅಭಿಪ್ರಾಯಪಟ್ಟಿದೆ.

 ಟಿಕ್ ಟಾಕ್ ಆ್ಯಪ್ ಭಾರತದಲ್ಲಿ 16ರಿಂದ 24 ವಯಸ್ಸಿನವರು ಹೆಚ್ಚಾಗಿ ಬಳಸುತ್ತಾರೆ. ಜನವರಿ ತಿಂಗಳಿನಲ್ಲಿ ತಮಿಳುನಾಡಿನ ವಿರುದುನಗರದ ಜಿಲ್ಲೆಯಲ್ಲಿ ನಾಲ್ಕು ಜನರು ತಮಾಷೆಗಾಗಿ ಪೊಲೀಸ್ ಠಾಣೆಯಲ್ಲೇ ಪೊಲೀಸರ ಟಿಕ್ ಟಾಕ್ ವಿಡಿಯೋವನ್ನು ಮಾಡಿದ್ದರು. ಆಗ ಪೊಲೀಸರು ನಾಲ್ವರನ್ನು ಬಂಧಿಸಿದ್ದರು. ಹುಡುಗಿಯರ ಟಿಕ್ ಟಾಕ್ ವಿಡಿಯೋವನ್ನು ಡೌನ್ ಲೋಡ್ ಮಾಡಿ ಅದನ್ನು ತಿರುಚಿ ವೇಶ್ಯಾವಾಟಿಕೆ ದಂಧೆಗೆ ಗ್ರಾಹಕರನ್ನು ಸೆಳೆಯುತ್ತಿದ್ದ ಜಾಲವನ್ನು ತಮಿಳುನಾಡು ಪೊಲೀಸರು ಬೇಧಿಸಿದ್ದರು.

ಬ್ಲೂ ವೇಲ್ ಗೇಮ್ ಮಕ್ಕಳನ್ನು ಹೇಗೆ ಹಾಳು ಮಾಡುತ್ತಿದೆಯೋ ಅದೇ ರೀತಿ ಟಿಕ್ ಟಾಕ್‍ನಿಂದ ಯುವ ಜನತೆ ಕೂಡ ಹಾದಿ ತಪ್ಪುತ್ತಿದ್ರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img