Sunday, September 19, 2021
Homeದೇಶಚುನಾವಣಾ ಆಯೋಗದ ಭರ್ಜರಿ ಬೇಟೆ – 1460 ಕೋಟಿ ಮೌಲ್ಯದ ಹಣ, ಮದ್ಯ ವಶ

ಇದೀಗ ಬಂದ ಸುದ್ದಿ

ಚುನಾವಣಾ ಆಯೋಗದ ಭರ್ಜರಿ ಬೇಟೆ – 1460 ಕೋಟಿ ಮೌಲ್ಯದ ಹಣ, ಮದ್ಯ ವಶ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ನಾಯಕರ ಮೇಲೆ ಕಣ್ಣಿಟ್ಟಿರುವ ಚುನಾವಣಾ ಆಯೋಗ ಭರ್ಜರಿ ಬೇಟೆಯಾಡಿದೆ. ಈವರೆಗೂ ಬರೊಬ್ಬರಿ 1460 ಕೋಟಿ ಮೌಲ್ಯದ ಹಣ, ಮದ್ಯ ಮತ್ತು ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದೆ.

ನೀತಿ ಸಂಹಿತೆ ಜಾರಿಗೆ ಬಂದ ದಿನದಿಂದ ಈ ವರೆಗೂ ಆಯೋಗದ ಅಧಿಕಾರಿಗಳು ದೇಶಾದ್ಯಂತ ಬರೊಬ್ಬರಿ 1460 ಕೋಟಿ ಮೌಲ್ಯದ ಹಣ, ಮದ್ಯ ಮತ್ತು ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಈ ಪೈಕಿ ಮತದಾರರಿಗೆ ಹಂಚಲು ಮತ್ತು ಇತರೆ ಕಾರ್ಯಗಳಿಗಾಗಿ ಅಕ್ರಮವಾಗಿ ತರಲಾಗುತ್ತಿದ್ದ 377.511 ಕೋಟಿ ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಂತೆಯೇ ಸುಮಾರು 157 ಕೋಟಿ ಮೌಲ್ಯದ ಮದ್ಯ, 705 ಕೋಟಿ ಮೌಲ್ಯದ ಮಾದಕ ವಸ್ತುಗಳು, 312 ಕೋಟಿ ಮೌಲ್ಯದ ಅಮೂಲ್ಯ ಲೋಹದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img