Wednesday, September 22, 2021
Homeಜಿಲ್ಲೆಮಂಡ್ಯಎಲ್.ಆರ್. ಶಿವರಾಮೇಗೌಡ ವಿರುದ್ಧ FIR

ಇದೀಗ ಬಂದ ಸುದ್ದಿ

ಎಲ್.ಆರ್. ಶಿವರಾಮೇಗೌಡ ವಿರುದ್ಧ FIR

ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ವಿರುದ್ಧ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಸಂಸದ ಎಲ್.ಆರ್. ಶಿವರಾಮೇಗೌಡ  ವಿರುದ್ಧ FIR ದಾಖಲಾಗಿದೆ. “ಸುಮಲತಾ, ನಿರ್ಮಾಪಕ ರಾಕ್​​ಲೈನ್ ವೆಂಕಟೇಶ್​ ಹಾಗೂ ನಟ ದರ್ಶನ್ ಗೌಡರಲ್ಲ, ನಾಯ್ಡು ಜನಾಂಗದವರು. ಮಂಡ್ಯವನ್ನ ನಾಯ್ಡುಮಯ ಮಾಡಲು ಹೊರಟಿದ್ದಾರೆ” ಎಂದು ಶಿವರಾಮೇಗೌಡ ಹೇಳಿಕೆ ನೀಡಿದ್ದರು.

ಹೀಗಾಗಿ ಜಾತಿ ಜಾತಿಗಳ ನಡುವೆ ಕೋಮುವಾದ ಸೃಷ್ಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಕಬ್ಬಾಳಯ್ಯ, ಜಿಲ್ಲಾ ಚುನಾವಣಾಧಿಕಾರಿ ಮಂಜುಶ್ರೀಗೆ ದೂರು ನೀಡಿದ್ದರು. ಕಬ್ಬಾಳಯ್ಯ ದೂರು ಆಧರಿಸಿ, ಪ್ರಕರಣ ದಾಖಲಿಸುವಂತೆ  ಚುನಾವಣಾಧಿಕಾರಿ ಸೂಚಿಸಿದ್ದರಿಂದ ರೆಪ್ರೆಸೆಂಟೇಷನ್ ಆಫ್​​ ಪೀಪಲ್ ಆ್ಯಕ್ಟ್​​ನ ಸೆಕ್ಷನ್ 125 ಪ್ರಕಾರ ನಾಗಮಂಗಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img