Wednesday, September 22, 2021
Homeದೇಶಉದ್ಧಟತನ ತೋರಿದ ಪಾಕ್ ಗೆ ತಕ್ಕ ಪಾಠ –ಗಡಿಯಲ್ಲಿ BSF ನಿಂದ ಡ್ರೋಣ್ ಧ್ವಂಸ

ಇದೀಗ ಬಂದ ಸುದ್ದಿ

ಉದ್ಧಟತನ ತೋರಿದ ಪಾಕ್ ಗೆ ತಕ್ಕ ಪಾಠ –ಗಡಿಯಲ್ಲಿ BSF ನಿಂದ ಡ್ರೋಣ್ ಧ್ವಂಸ

ಗಡಿಯಲ್ಲಿ ಪಾಕಿಸ್ತಾನ ಮತ್ತೆ ಉದ್ಧಟತನ ತೋರಿದ್ದು ಭಾರತದ ವಾಯುಗಡಿ ಉಲ್ಲಂಘಿಸಿ ಪಾಕ್ ಡ್ರೋಣ್ ಹಾರಾಟ ನಡೆಸಿದೆ.  ಇದಕ್ಕೆ ಖಡಕ್ ತಿರುಗೇಟು ನೀಡಿರುವ ಭಾರತೀಯ ಸೇನೆ ವಾಯುಗಡಿ ಉಲ್ಲಂಘಿಸಿದ ಪಾಕಿಸ್ತಾನದ ಡ್ರೋಣ್ ಅನ್ನು ಹೊಡೆದುರುಳಿಸಿದೆ.
ಸಂಗ್ರಹ ಚಿತ್ರ
ಬಿ ಎಸ್ ಎಫ್ ಯೋಧರು ಪಂಜಾಬಿನ ಹಳ್ಳಿಯೊಂದರಲ್ಲಿ ಹಾರಾಡುತ್ತಿದ್ದ ಪಾಕಿಸ್ತಾನಕ್ಕೆ ಸಂಬಂಧಿಸಿದ ಡ್ರೋನ್ ಹೊಡೆದುರುಳಿಸಿದ್ದಾರೆ ಎನ್ನಲಾಗಿದೆ. ಡ್ರೋಣ್ ಹಾರಾಟದ ನಂತರ ಈ ಭಾಗದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಡ್ರೋಣ್ ಹಾರಾಡುತ್ತಿರೋದು ಗಡಿ ಭದ್ರತಾ ಪಡೆಯ ಸಿಬ್ಬಂದಿ ಗಮನಕ್ಕೆ ಬರುತ್ತಿದ್ದಂತೆಯೇ ಅದನ್ನು ಹೊಡೆದುರುಳಿಸಲಾಗಿದೆ. ಆದರೆ ಹೊಡೆದುರುಳಿಸಲಾದ ಡ್ರೋಣ್ ಪಾಕಿಸ್ತಾನದ ನೆಲಕ್ಕೆ ಬಿದ್ದಿದೆಯೋ, ಭಾರತದ ನೆಲದಲ್ಲೇ ಬಿದ್ದಿದೆಯೋ ಎಂಬ ಬಗ್ಗೆ ಮಾಹಿತಿ ಇನ್ನ ಲಭ್ಯವಾಗಿಲ್ಲ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img