Wednesday, September 22, 2021
Homeಜಿಲ್ಲೆಬೆಳಗಾವಿಮ್ಯಾನ್ ಹೋಲ್ ಗೆ ಮತ್ತೆ ಮೂವರ ಬಲಿ

ಇದೀಗ ಬಂದ ಸುದ್ದಿ

ಮ್ಯಾನ್ ಹೋಲ್ ಗೆ ಮತ್ತೆ ಮೂವರ ಬಲಿ

ಚಿಕ್ಕೋಡಿ: ಮ್ಯಾನ್ ಹೋಲ್ ನಲ್ಲಿ ಇಳಿದಿದ್ದ ಮೂವರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿರುವ ದಾರುಣ ಘಟನೆಯೊಂದು ಡೆದಿದೆ. ವಿಜಯಪುರ ಜಿಲ್ಲೆ ಇಂಡಿ ಪಟ್ಟಣದ  ಹೊಟೇಲ್ ಅಮರ್ ಇಂಟರ್ ನ್ಯಾಷನಲ್ ಗೆ ಸೇರಿದ ಸೆಪ್ಟಿಕ್ ಟ್ಯಾಂಕ್ (ಮ್ಯಾನ್ ಹೋಲ್) ಸ್ವಚ್ಛಗೊಳಿಸಲು ಇಳಿದಿದ್ದ 50 ವರ್ಷದ ಗುಡುಸಾಬ್  ಬಾಗವಾನ್, 35 ವರ್ಷದ ಮುದುಕಪ್ಪ ಬೆಣ್ಣೆನ್ನವರ್, 25 ವರ್ಷದ ನಬೀಲಾಲ್ ಏಕವಾಲೆ ಸಾವನ್ನಪ್ಪಿದ್ದಾರೆ. ಮೃತರನ್ನ ಇಂಡಿ ಪಟ್ಟಣದ ನಿವಾಸಿಗಳು ಎಂದು ಗುರುತಿಸಲಾಗಿದೆ. ಇನ್ನೋರ್ವನ್ನು ಇಂಡಿ ಆಸ್ಪತ್ರೆಗೆ ದಾಖಲಿಸಿಲಾಗಿದೆ.

ಅಲ್ಲದೇ, ಮಂಗಳೂರು ಮೂಲದ ಹೊಟೇಲ್ ಮಾಲಿಕ ಒತ್ತಾಯಪೂರ್ವಕವಾಗಿ ಕಾರ್ಮಿಕರನ್ನ ಟ್ಯಾಂಕ್ ಸ್ವಚ್ಛಗೊಳಿಸಲು ಇಳಿಸಿದ್ದ ಎನ್ನುವ ಆರೋಪ ಸಹ ಕೇಳಿ ಬಂದಿದೆ. ಹೀಗೆ ಸೆಪ್ಟಿಕ್ ಟ್ಯಾಂಕ್ ಗಳನ್ನ ಸ್ವಚ್ಛಗೊಳಿಸಲು ಸಕ್ಕಿಂಗ್  ಮೆಷಿನ್ ಬಳಕೆ ಮಾಡಬೇಕು ಎನ್ನುವ ನಿಯಮವಿದೆ. ಅಲ್ಲದೆ ಹೀಗೆ ಸೆಪ್ಟಿಕ್ ಟ್ಯಾಂಕ್ ಗೆ ಇಳಿಯುವ ಕಾರ್ಮಿಕರಿಗೆ ಅಗತ್ಯ ಜೀವರಕ್ಷಕ ಕಿಟ್ ಗಳನ್ನ ಒದಗಿಸಬೇಕಾಗುತ್ತೆ. ಆದ್ರೆ ಇಲ್ಲಿ ಹೊಟೇಲ್ ಮಾಲೀಕ  ಬಡ ಕಾರ್ಮಿಕರ ಜೀವದ ಬಗ್ಗೆ ಲೆಕ್ಕಿಸದೆ ಟ್ಯಾಂಕ್ ಗೆ ಇಳಿಸಿದ್ದ ಎನ್ನಲಾಗಿದೆ‌. ಘಟನೆ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ಸಿಬ್ಬಂದಿ ಕಾರ್ಮಿಕರ ರಕ್ಷಣೆಗೆ ಪ್ರಯತ್ನಿಸಿದರು ಸಾಧ್ಯವಾಗಿಲ್ಲ‌. ಈ ಕುರಿತು ಇಂಡಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img