Wednesday, September 22, 2021
Homeದೇಶಭಾರತೀಯ ನೌಕಾಪಡೆಗೆ ' ಅಮೆರಿಕದ ರೋಮಿಯೋ '

ಇದೀಗ ಬಂದ ಸುದ್ದಿ

ಭಾರತೀಯ ನೌಕಾಪಡೆಗೆ ‘ ಅಮೆರಿಕದ ರೋಮಿಯೋ ‘

ಭಾರತೀಯ ನೌಕಾಪಡೆಗೆ ಮತ್ತೊಂದು ಗರಿಮೆ ಮೂಡಿದೆ. ಅಮೆರಿಕದ ಅತ್ಯಾಧುನಿಕ ತಂತ್ರಜ್ಞಾನಗಳಿಂದ ಕೂಡಿರುವ ಸಬ್‌ ಮೆರೀನ್‌ ನಿರೋಧಕ ಎಂಹೆಚ್ 60 ರೋಮಿಯೋ ಸೀ ಹಾಕ್ ಹೆಲಿಕಾಪ್ಟರ್ ಗಳು ಶೀಘ್ರವೇ ಭಾರತದ ನೌಕಾಪಡೆಯ ಬತ್ತಳಿಕೆ ಸೇರಲಿವೆ. ಸದ್ಯ ಅಮೆರಿಕ ನೌಕಾಪಡೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ಅತ್ಯಾಧುನಿಕ ರೋಮಿಯೋ ಸೀ ಹಾಕ್ ಹೆಲಿಕಾಪ್ಟರ್ ಗಳನ್ನು ಭಾರತಕ್ಕೆ ಮಾರಾಟ ಮಾಡಲು ಅಮೆರಿಕ ಅನುಮೋದನೆ ನೀಡಿದೆ. ಭಾರತಕ್ಕೆ ಅಮೆರಿಕ ಒಟ್ಟು 24 ಹೆಲಿಕಾಪ್ಟರ್ ಗಳನ್ನು ಮಾರಾಟ ಮಾಡುವ ಸಾಧ್ಯತೆ ಇದೆ. ಈ 24 ಹೆಲಿಕಾಪ್ಟರ್ ಗಳ ಮೊತ್ತ 2.4 ಬಿಲಿಯನ್ ಡಾಲರ್.

ಸಾಗರ ತಳದಲ್ಲಿರುವ ಸಬ್‌ ಮೆರೀನ್‌ ಗಳನ್ನು ಗುರುತಿಸಿ ಅವುಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನ ಇದು ಹೊಂದಿದೆ.ಸಮುದ್ರದಲ್ಲಿ ರಕ್ಷಣಾ ಕಾರ್ಯಾಚರಣೆ ಹಾಗೂ ಶೋಧ ಕಾರ್ಯಾಚರಣೆಯನ್ನು ಕೈಗೊಳ್ಳುವ ಸಾಮರ್ಥ್ಯ ಈ ‘ರೋಮಿಯೋ’ ಕಾಫ್ಟರ್‌ ಗಳಿದೆ. ಅಮೆರಿಕಾದ ಪ್ರತಿಷ್ಠಿತ ಶಸ್ತ್ರಾಸ್ತ್ರ ತಯಾರಿಕಾ ಸಂಸ್ಥೆ ಲಾಕ್‌ ಹೀಡ್‌ ಮಾರ್ಟಿನ್‌ ಸಂಸ್ಥೆ ಈ ಅತ್ಯಾಧುನಿಕ ಹೆಲಿಕಾಪ್ಟರ್ ಗಳನ್ನು ನಿರ್ಮಾಣ ಮಾಡುತ್ತಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img