Wednesday, September 22, 2021
Homeದೇಶನಾನು ಮದುವೆಯಾಗಿಲ್ಲ ಯಾಕೆ ಗೊತ್ತಾ..? ಮಾಯಾವತಿ

ಇದೀಗ ಬಂದ ಸುದ್ದಿ

ನಾನು ಮದುವೆಯಾಗಿಲ್ಲ ಯಾಕೆ ಗೊತ್ತಾ..? ಮಾಯಾವತಿ

ಯಾಕೆ ಮದುವೆಯಾಗಲಿಲ್ಲ ಎನ್ನುವ ವಿಚಾರವನ್ನು ಬಿಎಸ್‍ಪಿ ನಾಯಕಿ ಮಾಯಾವತಿ, ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಆನೆ ಹಾಗೂ ಮಾಯಾವತಿ ಪ್ರತಿಮೆ ನಿರ್ಮಾಣ ಪ್ರಕರಣದ ಸಂಬಂಧ ಸುಪ್ರೀಂ ಕೋರ್ಟ್ ಗೆ ನಿನ್ನೆ ಬಿಎಸ್‍ಪಿ ಪ್ರಮಾಣಪತ್ರ ಸಲ್ಲಿಸಿತ್ತು. ಈ ಪತ್ರದಲ್ಲಿ ಮಾಯಾವತಿ ಅವರು, ತಾವು ಯಾಕೆ ಮದುವೆ ಆಗಲಿಲ್ಲ ಎಂದು ಹೇಳಿಕೊಂಡಿದ್ದಾರೆ. ದೌರ್ಜನ್ಯಕ್ಕೆ ಒಳಗಾದ ಸಮುದಾಯದ ಜನರ ಏಳಿಗಾಗಿ ನನ್ನ ಜೀವನವನ್ನು ಮುಡಿಪಾಗಿಟ್ಟಿದ್ದೇನೆ. ಹೀಗಾಗಿ ನಾನು ಮದುವೆಯಾಗದಿರಲು ನಿರ್ಧರಿಸಿದೆ. ಈ ನಿರ್ಧಾರವನ್ನು ರಾಜ್ಯದಲ್ಲಿ ನಿರ್ಮಿಸಿದ ನನ್ನ ಹಾಗೂ ಆನೆಯ ಪ್ರತಿಮೆಗಳು ಪ್ರತಿನಿಧಿಸುತ್ತಿವೆ ಎಂದು ತಿಳಿಸಿದ್ದಾರೆ.

ಅಯೋಧ್ಯೆಯಲ್ಲಿ ಸರ್ಕಾರವೇ ರಾಮನ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿದೆ. ಆದರೆ ನನ್ನ ಹಾಗೂ ಬಿಎಸ್‍ಪಿ ಪಕ್ಷದ ಆನೆಯ ಚಿಹ್ನೆಯ ಪ್ರತಿಮೆಗೆ ಯಾಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದೇಶ ವಿವಿಧ ಭಾಗದಲ್ಲಿ ಮಾಜಿ ಪ್ರಧಾನಿಗಳಾದ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಪಿ.ವಿ.ನರಸಿಂಹರಾವ್ ಅವರ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಸಾರ್ವಜನಿಕರ ತೆರಿಗೆ ಹಣದಲ್ಲಿ 3 ಸಾವಿರ ಕೋಟಿ ರೂ. ವೆಚ್ಚ ಮಾಡಿ ಗುಜರಾತ್‍ನಲ್ಲಿ ಸರ್ದಾರ್ ವಲ್ಲಭ್‍ಭಾಯಿ ಅವರ ಪ್ರತಿಮೆ ನಿರ್ಮಿಸಲಾಗಿದೆ. ಉತ್ತರ ಪ್ರದೇಶದ ಬಿಜೆಪಿ ಸರ್ಕಾರ 200 ಕೋಟಿ ರೂ. ವೆಚ್ಚದಲ್ಲಿ ರಾಮನ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿದೆ ಎಂದು ಮಾಯಾವತಿ ದೂರಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img