Sunday, September 19, 2021
Homeಜಿಲ್ಲೆಧಾರವಾಡಧಾರವಾಡದಿಂದ ವಿನಯ್ – ಜೋಷಿ ಕಣಕ್ಕೆ

ಇದೀಗ ಬಂದ ಸುದ್ದಿ

ಧಾರವಾಡದಿಂದ ವಿನಯ್ – ಜೋಷಿ ಕಣಕ್ಕೆ

ಧಾರವಾಡ  :ವಿಳಂಬವಾಗಿ ಟಿಕೆಟ್  ಘೋಷಣೆಯಾಗಿರೋದ್ರಿಂದ ಸಹಜವಾಗಿಯೇ ಆತಂಕವಿದೆಎಂದು ಲೋಕಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಹೇಳಿದ್ದಾರೆ. ಇದೀಗ ಅಧಿಕೃತವಾಗಿ ಪಕ್ಷದ ಅಭ್ಯರ್ಥಿಯಾಗಿದ್ದೇನೆ ನನಗೆ ಸಮಯ ಕಡಿಮೆ ಇದೆ. ಇಂಥ ಸಮಯದಲ್ಲಿ ಚುನಾವಣೆ ಮಾಡುವದು ಸ್ವಲ್ಪ ಕಷ್ಟ ಎಲ್ಲಾ ಮುಖಂಡರ ಮತ್ತು ಕಾರ್ಯಕರ್ತರ ಜೊತೆ ಮಾತನಾಡಿದ್ದೇನೆ. ನಮ್ಮ ಕಾರ್ಯಕರ್ತರ ಪಡೆ ದೊಡ್ಡದಾಗಿದೆ ಇದರೊಂದಿಗೆ ಜೆಡಿಎಸ್ ಕೂಡ ಜೊತೆಗಿದೆ. ಹೊರಟ್ಟಿಯವರಂಥ ನಾಯಕರು ನಮ್ಮ ಜೊತೆ ಇದ್ದಾರೆ ಶಿವಳ್ಳಿ ನಿಧನದ ನಂತರ ಗಲಿಬಿಲಿಗೊಂಡಿದ್ದೆವು. ಆದರೆ ಅವರ ಕಾರ್ಯಕರ್ತರು ನಮಗೆ ಅಭಯ ನೀಡಿದ್ದಾರೆ ಶಿವಳ್ಳಿಯವರ ರೀತಿಯಲ್ಲೇ  ಕೆಲಸ ಮಾಡೋದಾಗಿ ಹೇಳಿದ್ದಾರೆ

ಅಲ್ಪಸಂಖ್ಯಾತರ ಅಭ್ಯರ್ಥಿಗೆ ಟಿಕೆಟ್ ನಿರಾಕರಿಸಿದ ಕುರಿತು ಮಾತನಾಡಿದ ಅವರು ನಮ್ಮ ಲ್ಲಿ ಅಲ್ಪಸಂಖ್ಯಾತರು ಅನ್ನೋದಿಲ್ಲ ಅದೆಲ್ಲ ಇರೋದು ಬಿಜೆಪಿಯಲ್ಲಿ ಮಾತ್ರ ನಮಲ್ಲಿ ಅಂಥ ಬೇಧ-ಭಾವ ಇಲ್ಲ ನಮ್ಮಲ್ಲಿ ಎಲ್ಲರೂ ಒಂದೇ ಎಂದು  ಹೇಳಿದರು. ಬಿಜೆಪಿ ಅಭ್ಯರ್ಥಿ  ಪ್ರಹ್ಲಾದ್ ಜೋಶಿ ವಿರುದ್ಧವೂ ಹರಿಹಾಯ್ದರು.

ಈ ಮಧ್ಯೆ, ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ನಾಮಪತ್ರ ಸಲ್ಲಿಸಿದ್ದಾರೆ. ಇದಕ್ಕೂ ಮುನ್ನ ಗಾಂಧಿ ಚೌಕ ಲಕ್ಷ್ಮಿ ನರಸಿಂಹ ದೇವಸ್ಥಾನ, ಕೆಸಿಡಿ ವೃತ್ತದ ಗಣೇಶ ಮಂದಿರ, ಮರಾಠಾ ಕಾಲನಿಯ ದುರ್ಗಾದೇವಿ, ಅಂಭಾಭವಾನಿ ದೇವಸ್ಥಾನ ಹಾಗೂ ಮರುಘಾಮಠಕ್ಕೆ ಭೇಟಿ ನೀಡಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img