Wednesday, September 22, 2021
Homeದೇಶಕಾಂಡೋಮ್ ಜಾಹೀರಾತಿಗೆ ನೋ ಎಂದ ರಣ್ ವೀರ್ ಸಿಂಗ್

ಇದೀಗ ಬಂದ ಸುದ್ದಿ

ಕಾಂಡೋಮ್ ಜಾಹೀರಾತಿಗೆ ನೋ ಎಂದ ರಣ್ ವೀರ್ ಸಿಂಗ್

ಬಾಲಿವುಡ್ ನಟ, ದೀಪಿಕಾ ಪಡುಕೋಣೆ ಪತಿ ರಣ್‍ವೀರ್ ಸಿಂಗ್ ಇನ್ಮುಂದೆ ಕಾಂಡೋಮ್ ಜಾಹೀರಾತುಗಳಲ್ಲಿ ನಟಿಸಲ್ವಂತೆ. ಐದು ವರ್ಷಗಳ ಹಿಂದೆ ರಣ್ ವೀರ್ ಸಿಂಗ್ ಕಾಂಡೋಮ್ ಕಂಪನಿಯ ರಾಯಭಾರಿಯಾಗಿದ್ರು.  ಐದು ವರ್ಷದ ಹಿಂದಿನ ರಣ್‍ವೀರ್ ಒಪ್ಪಂದ ಈ ವರ್ಷ ಅಂತ್ಯವಾಗಲಿದೆ. ಕಂಪನಿ ಒಪ್ಪಂದವನ್ನು ಮುಂದುವರಿಸುವ ಇಚ್ಛೆ ವ್ಯಕ್ತಪಡಿಸಿದ್ದರೂ, ರಣ್‍ವೀರ್ ‘ನೋ’ ಎಂದಿದ್ದಾರೆ ಎನ್ನಲಾಗಿದೆ. ಸಾಮಾನ್ಯವಾಗಿ ಸ್ಟಾರ್ ನಟರು ಕಾಂಡೋಮ್ ಜಾಹೀರಾತಿನಿಂದ ಅಂತರ ಕಾಯ್ದುಕೊಳ್ಳುತ್ತಾರೆ. ಆದರೆ ರಣ್‍ವೀರ್ ಯಾವುದನ್ನು ಲೆಕ್ಕಿಸದೇ ಕಾಂಡೋಮ್ ಜಾಹಿರಾತಿನಲ್ಲಿ ಮಿಂಚಿದ್ದರು. ರಣ್‍ವೀರ್ ಜಾಹಿರಾತಿನಿಂದ ಕಂಪನಿಯ ಉತ್ಪನ್ನಗಳ ಮಾರಾಟ ಸಹ ಏರಿಕೆ ಕಂಡಿತ್ತು. ಸದ್ಯ ರಣ್‍ವೀರ್ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಜೀವನಾಧರಿತ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ರಣ್‍ವೀರ್ ಮದುವೆಯಾಗಿದ್ದರಿಂದ ಈ ರೀತಿಯ ಜಾಹೀರಾತುಗಳನ್ನ ತಿರಸ್ಕರಿಸುತ್ತಿದ್ದಾರೆ ಎನ್ನಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img