Wednesday, September 22, 2021
Homeದೇಶಬಡವರಿಗೆ ‘ನ್ಯಾಯ್’ ಕಾಶ್ಮೀರಕ್ಕೆ ಹೊಸ ಅಜೆಂಡಾ – ಕಾಂಗ್ರೆಸ್ ಪ್ರಣಾಳಿಕೆ ಭರವಸೆ

ಇದೀಗ ಬಂದ ಸುದ್ದಿ

ಬಡವರಿಗೆ ‘ನ್ಯಾಯ್’ ಕಾಶ್ಮೀರಕ್ಕೆ ಹೊಸ ಅಜೆಂಡಾ – ಕಾಂಗ್ರೆಸ್ ಪ್ರಣಾಳಿಕೆ ಭರವಸೆ

ದೆಹಲಿ : ನಿರೀಕ್ಷೆಯಂತೆ ತನ್ನ ಲೋಕಸಭಾ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಬಡವರಿಗೆ ಕನಿಷ್ಟ ಆದಾಯ ಖಾತರಿಪಡಿಸುವ ನ್ಯಾಯ್ ಯೋಜನೆ ಪ್ರಣಾಳಿಕೆಯ ನಂಬರ್ 1 ಪ್ರಾಮಿಸ್ ಆಗಿದೆ. ಅಲ್ಲದೆ, ರೈತರ ಹಿತರಕ್ಷಣೆ ಮಾಡುವ ಭರವಸೆ ನೀಡಿರುವ ರಾಹುಲ್ ಗಾಂಧಿ, ಜಮ್ಮು ಕಾಶ್ಮೀರದ ಅಭಿವೃದ್ಧಿಗೆ ಹೊಸ ಅಜೆಂಡಾ ರೂಪಿಸುವುದಾಗಿ ಘೋಷಿಸಿದ್ದಾರೆ.

ದೆಹಲಿಯಲ್ಲಿ ಪ್ರಣಾಳಿಕೆ ಬಿಡುಗಡೆ  ಮಾಡಿದ  ಕಾಂಗ್ರೆಸ್ , ತಾನು ಅಧಿಕಾರಕ್ಕೆ ಬಂದರೆ, ನೀತಿ ಆಯೋಗ ರದ್ದು ಪಡಿಸುವುದಾಗಿ ಹೇಳಿದೆ. ಅಷ್ಟೇ ಅಲ್ಲ ಬಹು ಚರ್ಚಿತ ರಫೇಲ್ ಹಗರಣದ ಬಗ್ಗೆ ತನಿಖೆ ನಡೆಸುವ  ಭರವಸೆಯನ್ನೂ ನೀಡಿದೆ. ಅಲ್ಲದೆ ತೀವ್ರ ವಿವಾದ ಸೃಷ್ಟಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಮೊದಲ ದಿನವೇ ರದ್ದು ಪಡಿಸುವುದಾಗಿ ಹೇಳಿದೆ.

ನ್ಯಾಯ್ ಯೋಜನೆ  ಮೂಲಕ ವಾರ್ಷಿಕ 72 ಸಾವಿರ ರೂಪಾಯಿಗಳನ್ನು ನೀಡುವ ಭರವಸೆಯನ್ನು ಕಾಂಗ್ರೆಸ್ ನೀಡಿದೆ. 22 ಲಕ್ಷ ಸರಕಾರಿ ಉದ್ಯೋಗಳನ್ನು ಭರ್ತಿ ಮಾಡುವುದು, ಎಂನರೇಗಾ ಯೋಜನೆಯಡಿ 150 ದಿನಗಳ ಉದ್ಯೋಗ  ಖಾತರಿ,  ಕೃಷಿಕರಿಗಾಗಿಯೇ  ಪ್ರತ್ಯೇಕ ಬಜೆಟ್ ಮಂಡಿಸುವುದಾಗಿ ರಾಹುಲ್ ಗಾಂಧಿ ಘೋಷಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img