Monday, January 18, 2021
Home ಜಿಲ್ಲೆ ತುಮಕೂರು ಕಾಂಗ್ರೆಸ್ ಮತ್ತು ಜೆ.ಡಿ.ಎಸ್.ಕಾರ್ಯಕತರು ಭಿನ್ನಾಬಿಪ್ರಾಯ ಬಿಟ್ಟು ಗೆಲುವಿಗೆ ಸಹಕರಿಸಲು ಕರೆ

ಇದೀಗ ಬಂದ ಸುದ್ದಿ

ಕಾಂಗ್ರೆಸ್ ಮತ್ತು ಜೆ.ಡಿ.ಎಸ್.ಕಾರ್ಯಕತರು ಭಿನ್ನಾಬಿಪ್ರಾಯ ಬಿಟ್ಟು ಗೆಲುವಿಗೆ ಸಹಕರಿಸಲು ಕರೆ

ಕುಣಿಗಲ್: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಿ ಕೆ ಸುರೇಶ ಭರ್ಜರಿ ಪ್ರಚಾರ ನಡೆಸಿದ್ದಾರೆ. ಕೋಮು ವಾದಿ ಬಿ.ಜೆ.ಪಿ.ಯನ್ನು ಅಧಿಕಾರ ದಿಂದ ದೂರ ಇಡುವ ಉದ್ದೇಶ ದಿಂದ ರಾಜ್ಯದ ಲ್ಲಿ ಮೈತ್ರಿ ಸರ್ಕಾರ ರಚನೆಯಾಗಿದ್ದು ಉತ್ತಮ ಯೊಜನೆಗಳನ್ನ ಜಾರಿಗೆ ಬಂದಿದೆ ಆದ್ದರಿಂದ ಲೋಕ ಸಭಾ ಚುನಾವಣೆಯಲ್ಲೂ ಕೂಡ ಮೈತ್ರಿ ಮಾಡಿಕೊಂಡಿದ್ದು ಜೆ.ಡಿ.ಎಸ್ ನವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಮಾಡಿ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಅವರು ಕರೆ ನೀಡಿ ದರು

ಬಿ.ಜೆ.ಪಿಯವರು ಸುಳ್ಳನ್ನೆ ಗಟ್ಟಿ ಯಾಗಿ ಮಾತನಾಡಿ ಸತ್ಯ ಮಾಡಲು ಹೊರಟಿದ್ದಾರೆ ಅವರನ್ನು ನಂಬ ಬೇಡಿ .ಕಾವೇರಿ ವಿಷಯವನ್ನು ಮೋದಿ ಎಷ್ಟು ಬಾರಿ ಚರ್ಚಿಸಿದ್ದಾರೆ ಸಮಸ್ಯೆನ್ನು ಬಗೆಹರಿಸಲು ಯಾವ ಕ್ರಮ ತೆಗೆದುಕೊಂಡಿದ್ದಾರೆ ಅವರು ಕರ್ನಾಟಕ ಕ್ಕೆ  ತುಂಬಾ ಮಲತಾಯಿ ಧೋರಣೆ ತೋರಿದ್ದು ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ ಎಂದರು

ಹೇಮಾವತಿ ಯಿಂದ ಕುಣಿಗಲ್ ಕೆರೆಗೆ ನೀರು ಹರಿಸಲು ಜಿಲ್ಲೆಯ ಬಿ.ಜೆ.ಪಿ.ನಾಯಕರು ಅಡ್ಡಗಾಲು ಹಾಕಿದ್ದಾರೆ.  ಆದ್ದರಿಂದ ಸಮಗ್ರ ಕುಣಿಗಲ್ ಅಬಿವ್ರದ್ದಿಗಾಗಿ ಕಾಂಗ್ರೆಸ್ ಬೆಂಬಲಿಸಿ ಎಂದು ಮನವಿ  ಮಾಡಿದರು. ಈ ಸಂದರ್ಭದಲ್ಲಿ ಕುಣಿಗಲ್ ಕ್ಷೇತ್ರದ ಶಾಸಕ ರಂಗನಾಥ್ ಪ್ರಚಾರದಲ್ಲಿ ಪಾಲ್ಗೊಂಡಿದ್ದರು.

TRENDING