Wednesday, September 22, 2021
Homeಜಿಲ್ಲೆಕೋಲಾರಇದಪ್ಪಾ ಮಾತು ! ಜೆಡಿಎಸ್, ಕಾಂಗ್ರೆಸ್ ನನ್ನ ಎರಡು ಕಣ್ಣುಗಳಿದ್ದಂತೆ -ಮುನಿಯಪ್ಪ

ಇದೀಗ ಬಂದ ಸುದ್ದಿ

ಇದಪ್ಪಾ ಮಾತು ! ಜೆಡಿಎಸ್, ಕಾಂಗ್ರೆಸ್ ನನ್ನ ಎರಡು ಕಣ್ಣುಗಳಿದ್ದಂತೆ -ಮುನಿಯಪ್ಪ

ಕೋಲಾರ : ಶ್ರೀನಿವಾಸಪುರ ಪಟ್ಟಣದ ಮಾವಿನ ಮಂಡಿಯಲ್ಲಿ JDS ಪಕ್ಷದ ವತಿಯಿಂದ ಲೋಕಸಭಾ ಚುನಾವಣೆಯ ಮೈತ್ರಿ ಪಕ್ಷಗಳ ಬೃಹತ್ ಸಮಾವೇಶ ನಡೆಯಿತು. ಮೈತ್ರಿ ಅಭ್ಯರ್ಥಿ ಕೆ ಎಚ್ ಮುನಿಯಪ್ಪ ಮತ್ತು ಮಾಜಿ ಶಾಸಕ   ಜಿ ಕೆ ವೆಂಕಟಾಶಿವರೆಡ್ಡಿ ನೇತೃತ್ವದಲ್ಲಿ ಸಾವಿರಾರು ಮುಖಂಡರು ಹಾಗೂ ಕಾರ್ಯಕರ್ತರು ಸೇರಿದ್ದರು

ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಕೆಲವು ಮುಖಂಡರು ಕಾಂಗ್ರೆಸ್ ಮತ್ತು JDS ಪಕ್ಷಗಳು 30 ವರ್ಷ ಬದ್ಹ್ದ ಶತ್ರುಗಳಾಗಿದ್ದವು. ಈ ಲೋಕಸಭಾ ಚುನಾವಣೆಗೆ ಜಿ ಕೆ ವೆಂಕಟಾಶಿವರೆಡ್ಡಿಯವರು ಧರ್ಮವನ್ನು ಉಳಿಸಲು ಹಾಗೂ ಕೋಮುವಾದಿ ಪಕ್ಷಗಳನ್ನು  ಅಧಿಕಾರಕ್ಕೆ ಬರಲು ಬಿಡಬಾರದೆಂದು, ಎಲ್ಲರೂ ಒಟ್ಟಾಗಿದ್ದೇವೆ. ಮುನಿಯಪ್ಪ ಅವರನ್ನು ಬೆಂಬಲಿಸುವಂತೆ ವೆಂಕಟಶಿವಾರೆಡ್ಡಿ ಮನವಿ ಮಾಡಿಕೊಂಡರು.

ನಂತರ ಮಾತನಾಡಿದ ಕೆ ಎಚ್ ಮುನಿಯಪ್ಪ ಮತದಾರರಾದ ನೀವು 4 ಬಾರಿ ನನಗೆ ಆಶೀರ್ವಾದ ಮಾಡಿದ್ದೀರಿ ಅದೇ ರೀತಿ ಈ ಬಾರಿಯೂ ನನಗೆ ನಿಮ್ಮ ಆಶೀರ್ವಾದ ಬೇಕೆಂದು, JDS ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ನನ್ನ  2 ಕಣ್ಣುಗಳಿದ್ದಂತೆ,ಆದ್ದರಿಂದ ಯಾವುದೇ ರೀತಿಯ ತಂಟೆ ತಕರಾರು ಇರುವುದಿಲ್ಲ, ಪ್ರತಿಯೊಂದು ವಿಷಯದಲ್ಲಿ ನನ್ನ ಸಹಕಾರ ಇರುತ್ತದೆ ಎಂದು ಪ್ರಮಾಣ ಮಾಡಿದರು .

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img