Wednesday, September 22, 2021
Homeಜಿಲ್ಲೆಬೆಳಗಾವಿನನಗೆ ಅಸಮಧಾನ ಇಲ್ಲ, ಹೈಕಮಾಂಡ್ ನಿರ್ಧಾರಕ್ಕೆ ಬದ್ಧ:ರಮೇಶ ಕತ್ತಿ

ಇದೀಗ ಬಂದ ಸುದ್ದಿ

ನನಗೆ ಅಸಮಧಾನ ಇಲ್ಲ, ಹೈಕಮಾಂಡ್ ನಿರ್ಧಾರಕ್ಕೆ ಬದ್ಧ:ರಮೇಶ ಕತ್ತಿ

ಬೆಳಗಾವಿ:ನನಗೆ ಅಸಮಧಾನವಿಲ್ಲ, ನಾನು ಹಿಂಬಾಗಿಲ ಆಕಾಂಕ್ಷಿಯಲ್ಲ ಎಂದು ರಮೇಶ ಕತ್ತಿ ತಿಳಿಸಿದ್ದಾರೆ.  ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ನಡೆಸಿದ ಸಂಧಾನದ ನಂತರ ಬಿಎಸ್ವೈ ಅವರ ಸುದ್ದಿಗೋಷ್ಠಿಯಲ್ಲಿ ಕತ್ತಿ ಸಹೋದರರು, ಬಿಜೆಪಿಯಲ್ಲಿ ತಮಗೆ ಯಾವುದೇ ಅಸಮಾಧಾನವಿಲ್ಲ ಎಂದು ಸ್ಪಷ್ಟಪಡಿಸಿದರು.

ದೇಶ, ಪಕ್ಷ, ನರೇಂದ್ರ ಮೋದಿ ಮತ್ತು ಯಡಿಯೂರಪ್ಪ ಅವರೇ ನಮಗೆ ಮುಖ್ಯ. ಅವರು ತೆಗೆದುಕೊಂಡ ನಿರ್ಧಾರವೇ ನಮಗೆ ಅಂತಿಮ. ಹೈಕಮಾಂಡ್ ನಿರ್ಧರಿಸಿದ ಅಭ್ಯರ್ಥಿಯನ್ನೇ ಗೆಲ್ಲಿಸಲು ನಾವು ದುಡಿಯುತ್ತೇವೆ ಎಂದು ರಮೇಶ ಕತ್ತಿ ತಿಳಿಸಿದರು.

ವಿಧಾನಪರಿಷತ್ ಸ್ಥಾನ ತನಗೆ ಕೊಟ್ಟರೆ ನಿರಾಕರಿಸುವುದಾಗಿ ರಮೇಶ ಕತ್ತಿ ತಿಳಿಸಿದ್ದು, ಹಿಂಬಾಗಿಲ ರಾಜಕಾರಣ ಮತ್ತು ಶಾಸನಸಭೆಗೆ ಆಯ್ಕೆ ಆಗುವುದು ನನಗೆ ಇಷ್ಟವಿಲ್ಲ ಎಂದರು. ರಮೇಶ ಕತ್ತಿ ಅವರಿಗೆ ಸೂಕ್ತಸಮಯದಲ್ಲಿ, ಸೂಕ್ತ ಸ್ಥಾನ ಕೊಡುತ್ತೇವೆ ನಿರೀಕ್ಷಿಸಿ ಎಂದು ಬಿ. ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img