Wednesday, September 22, 2021
Homeಜಿಲ್ಲೆಕೋಲಾರಕೋಲಾರದಲ್ಲಿ ಬಿಜೆಪಿ ಪರ ಕೈ ಶಾಸಕರ ಮತಯಾಚನೆ !

ಇದೀಗ ಬಂದ ಸುದ್ದಿ

ಕೋಲಾರದಲ್ಲಿ ಬಿಜೆಪಿ ಪರ ಕೈ ಶಾಸಕರ ಮತಯಾಚನೆ !

ಆಂಕರ್ : ಕೋಲಾರ ಲೋಕಸಭಾ ಚುನಾವಣ ಕಣ ರಂಗೇರಿದ್ದು, ಮುನಿಯಪ್ಪ ವಿರೋಧಿ ಅಲೆ ಬೀಸತೊಡಗಿದೆ.  ಕಾಂಗ್ರೆಸ್  ನಲ್ಲಿನ ಬೂದಿ ಮುಚ್ಚಿದ ಕೆಂಡದಂತಿದ್ದ ಗುಂಪುಗಾರಿಕೆ, ಭಿನ್ನಮತ, ಅಸಮಧಾನ ಭುಗಿಲೆದ್ದಿದೆ. ಕೋಲಾರ ಜಿಲ್ಲೆಯಾದ್ಯಂತ ಇಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಹಾಲಿ, ಮಾಜಿ ಶಾಸಕರು ಸೇರಿದಂತೆ ಮುಖಂಡರು ತಮ್ಮ ಕಾರ್ಯಕರ್ತರ ಸಭೆಗಳನ್ನ ನಡೆಸಿ ಅಭಿಪ್ರಾಯಗಳನ್ನ ಪಡೆದ್ರು. ಕೋಲಾರ ಜಿಲ್ಲೆ ಮುಳಬಾಗಿಲು ವಿಧಾನಸಭ ಕ್ಷೇತ್ರದ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಹಾಲಿ ಶಾಸಕ ನಾಗೇಶ್ ಮುಳಬಾಗಿಲಿನ ಕಪ್ಪಲಮಡುಗು ಗ್ರಾಮದ ಟೊಮೆಟೊ ಮಂಡಿಯಲ್ಲಿ ತಮ್ಮ ಬೆಂಬಲಿಗರ ಸಭೆಯನ್ನ ನಡೆಸಿದ್ರು. ಸಭೆಯಲ್ಲಿ ಈ ಬಾರಿ ಲೋಕಸಭ ಚುನಾವಣೆಯ ಕಾಂಗ್ರೇಸ್ ಅಭ್ಯರ್ಥಿ ಹಾಲಿ ಸಂಸದ ಕೆ.ಎಚ್.ಮುನಿಯಪ್ಪ ಅವರ ವಿರುದ್ದ ಹಾಲಿ ಮತ್ತು ಮಾಜಿ ಶಾಸಕರಿಬ್ಬರು ವಾಗ್ದಾಳಿ ನಡೆಸಿದ್ರು. ಜೊತೆಗೆ ಸಭೆಗೆ ಬಂದಿದ್ದ ಕಾರ್ಯಕರ್ತರಿಗೆ ಈ ಬಾರಿ ಬಿಜೆಪಿ ಅಭ್ಯರ್ಥಿಯನ್ನ ಬೆಂಬಲಿಸುವಂತೆ ಸೂಚನೆ ನೀಡಿದ್ರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img