Wednesday, September 22, 2021
Homeಕ್ರೈಂ ನ್ಯೂಸ್ಮೊಬೈಲ್ , ಬೈಕ್ ಕಳ್ಳರ ಸೆರೆ

ಇದೀಗ ಬಂದ ಸುದ್ದಿ

ಮೊಬೈಲ್ , ಬೈಕ್ ಕಳ್ಳರ ಸೆರೆ

ಬೆಂಗಳೂರಿನ  ಕೆ ಆರ್ ಪುರಂನಲ್ಲಿ ಅಂಗಡಿಯ ಶೆಟರ್ ಎಳೆದು ಕಳ್ಳತನ ಮಾಡುತ್ತಿದ್ದ ಆರೋಪಿಗಳ‌ನ್ನು ಬಂಧಿಸಲಾಗಿದೆ. ಮೂವರು ಆರೋಪಿಗಳನ್ನ ಬಂಧಿಸಿದ ವೈಟ್ ಫೀಲ್ಡ್ ಪೊಲೀಸರು, ಜನರಿಗೆ ಖುಷಿ ಸುದ್ದಿ ಕೊಟ್ಟಿದ್ದಾರೆ. ಸಂಜಯ್ ಕುಮಾರ್ ,ಪ್ರದೀಪ್ ಸಿಂಗ್ ,ಬಾಲರಾಜ್ ಬಂಧಿತ ಆರೋಪಿಗಳು.

ಆರೋಪಿಗಳು ರಾತ್ರೋ ರಾತ್ರಿ ಅಂಗಡಿಗೆ ನುಗ್ತಿದ್ರು. ಶೆಟರ್ ಎಳೆದು ಕಳ್ಳತನ ಮಾಡಿ ಎಸ್ಕೇಪ್ ಆಗ್ತಿದ್ರು ಕ್ಷಣಮಾತ್ರದಲ್ಲಿ ಅಂಗಡಿಯಲ್ಲಿದ್ದ ಮೊಬೈಲ್ ಗಳು ಗಾಯಬ್ ಆಗ್ತಿದ್ವು. ಇದೇ ತಿಂಗಳ 29ರ ರಾತ್ರಿ ಕೂಡ ಕಳ್ಳತನ ಮಾಡಿದ್ದ ಆರೋಪಿಗಳು, ಮೊಬೈಲ್ ಅಂಗಡಿಯ 50ಕ್ಕೂ ಹೆಚ್ಚು ಮೊಬೈಲ್ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದರು. ಬಳಿಕ ಆರೋಪಿಗಳು ಬೈಕ್ ಕಳ್ಳತನ ಪ್ರಕರಣದಲ್ಲೂ ಭಾಗಿಯಾಗಿದ್ದರು. ಇದೇ ಪ್ರಕರಣದಲ್ಲಿ ಈಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img