Sunday, September 19, 2021
Homeಜಿಲ್ಲೆಗದಗಈ ಬಾರಿ ದೇವೇಗೌಡ ಕಂಪನಿ ಮನೆಗೆ - ಶೆಟ್ಟರ್

ಇದೀಗ ಬಂದ ಸುದ್ದಿ

ಈ ಬಾರಿ ದೇವೇಗೌಡ ಕಂಪನಿ ಮನೆಗೆ – ಶೆಟ್ಟರ್

ಗದಗ : ಈ ಬಾರಿ ಚುನಾವಣೆಯಲ್ಲಿ ದೇವೇಗೌಡ ಕಂಪನಿಯನ್ನು ಜನ ಮನೆಗೆ ಕಳುಹಿಸ್ತಾರೆ.  ಕಾಂಗ್ರೆಸ್-ಜೆಡಿಎಸ್ ಒಂಥರಾ ನಾಟಕ ಕಂಪನಿ ಇದ್ದಂತೆ. ಇವೆರಡು ಪಕ್ಷ ತಿರಸ್ಕರಿಸಿ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನ ಪ್ರಧಾನಿ ಮಾಡಲು ಜನ ತೀರ್ಮಾನಿಸಿದ್ದಾರೆ ಎಂದು ಮಾಜಿ ಸಿಎಮ್ ಜಗದೀಶ್ ಶೆಟ್ಟರ್ ಹೇಳಿದ್ದಾರೆ.  ಗದಗ್ ನಲ್ಲಿ ಮಾದ್ಯಮದವರೊಂದಿಗೆ ಮಾತನಾಡಿ,  ಬಿಜೆಪಿ  ದೇಶದಲ್ಲಿ 300ಕ್ಕೂ ಹೆಚ್ಚು ಸ್ಥಾನದಲ್ಲಿ ಗೆಲ್ಲುವ ವಿಶ್ವಾಸವಿದ್ದು, ಎನ್.ಡಿ.ಎ ಮೈತ್ರಿಕೂಟಕ್ಕೆ 2/3 ರಷ್ಟು ಸ್ಥಾನದಲ್ಲಿ ಗೆಲುವು ಖಚಿತವಾಗಿದೆ. ಪ್ರಧಾನಿ ಮೋದಿ ಅವರ ಐದು ವರ್ಷದ ಅಭಿವೃದ್ಧಿ ಕಾರ್ಯವನ್ನಿಟ್ಟುಕೊಂಡು ಮತ ಕೇಳುತ್ತಿದ್ದೇವೆ. ಐದು ವರ್ಷದ ಹಿಂದೆ ಆರ್ಥಿಕ ಅಭಿವೃದ್ಧಿಯಲ್ಲಿ ಭಾರತ 11ನೇ ಸ್ಥಾನದಲ್ಲಿತ್ತು. ಆದ್ರೆ ಮೋದಿ ಅವರ ದೂರದೃಷ್ಠಿಯಿಂದ ಇದೀಗ 6 ಸ್ಥಾನಕ್ಕೆ ಬಂದಿದೆ ಎಂದರು. ಇದೇ ವೇಳೆ ಕಾಂಗ್ರೆಸ್ ಮುಖಂಡ ಎಚ್.ಕೆ.ಪಾಟೀಲ್ ವಿರುದ್ಧ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ರು.  ಗದಗ ಜಿಲ್ಲೆ ಅಭಿವೃದ್ಧಿಗೆ ಎಚ್‌.ಕೆ.ಪಾಟೀಲ್ ಏನು ಮಾಡಿದ್ದಾರೆ. ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್.ಪಾಟೀಲ್ ಕೊಡುಗೆ ಏನು? ಎಂದು ಪ್ರಶ್ನಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img