Sunday, September 19, 2021
Homeರಾಜಕೀಯಸುಮಲತಾಗೆ ಸಿಕ್ಕಿದ್ದು “ಕಹಳೆ ಊದುತ್ತಿರುವ ವ್ಯಕ್ತಿ” ಚಿಹ್ನೆ

ಇದೀಗ ಬಂದ ಸುದ್ದಿ

ಸುಮಲತಾಗೆ ಸಿಕ್ಕಿದ್ದು “ಕಹಳೆ ಊದುತ್ತಿರುವ ವ್ಯಕ್ತಿ” ಚಿಹ್ನೆ

ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆ ಚುನಾವಣಾ ಆಯೋಗ ‘ಕಹಳೆ ಊದುತ್ತಿರುವ ವ್ಯಕ್ತಿಯ’ ಗುರುತಿನ ಚಿಹ್ನೆಯನ್ನ ನೀಡಿದೆ.

ಜಿಲ್ಲಾಧಿಕಾರಿ ಮಂಜುಶ್ರೀ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಂತಿಮವಾಗಿ ಚಿಹ್ನೆ ನಿಗದಿ ಮಾಡಲಾಗಿದೆ. ಸುಮಲತಾ ಚುನಾವಣಾ ಏಜೆಂಟ್ ಮದನ್ ಸಮ್ಮುಖದಲ್ಲಿ ಚಿಹ್ನೆ ನಿಗದಿ ಮಾಡಲಾಯಿತು. ಸುಮಲತಾ ಅವರಿಗೆ ಕಹಳೆ ಊದುತ್ತಿರುವ ವ್ಯಕ್ತಿಯ ಗುರುತು ಹಾಗೂ ಕ್ರಮಸಂಖ್ಯೆ 20 ಅನ್ನ ನಿಗದಿ ಪಡಿಸಲಾಗಿದೆ.

ಮತ್ತೊಬ್ಬ ಪ್ರಮುಖ ಸ್ಪರ್ಧಿ ಜೆಡಿಎಸ್​​​ನ ನಿಖಿಲ್​ ಕುಮಾರಸ್ವಾಮಿ ಅವರಿಗೆ ಕ್ರಮ ಸಂಖ್ಯೆ 1 ಪ್ರಾಪ್ತಿಯಾಗಿದೆ. ಜೆಡಿಎಸ್​​ಗೆ ನೋಂದಾಯಿತ, ಪ್ರಾದೇಶಿಕ ಪಕ್ಷ ಸ್ಥಾನಮಾನ ಇರುವುದರಿಂದ ನಿಖಿಲ್​​ಗೆ ನಂಬರ್​ 1 ಕ್ರಮಸಂಖ್ಯೆ ನೀಡಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img