Wednesday, September 22, 2021
Homeಸಿನಿಮಾ'ರಣಂ' ದುರಂತ ಪ್ರಕರಣ –ನಾಲ್ವರ ವಿರುದ್ಧ FIR

ಇದೀಗ ಬಂದ ಸುದ್ದಿ

‘ರಣಂ’ ದುರಂತ ಪ್ರಕರಣ –ನಾಲ್ವರ ವಿರುದ್ಧ FIR

‘ರಣಂ’ ಚಿತ್ರೀಕರಣದ ವೇಳೆ ನಡೆದ ದುರಂತ ಪ್ರಕರಣದ ಹಿನ್ನೆಲೆಯಲ್ಲಿ ನಿರ್ಮಾಪಕ ಕನಕಪುರ ಶ್ರೀನಿವಾಸ್, ನಿರ್ದೇಶಕ ವಿ. ಸಮುದ್ರ, ಸ್ಟಂಟ್ ಮಾಸ್ಟರ್ ವಿಜಯನ್, ಅಸೋಸಿಯೇಟ್ ಮ್ಯಾನೇಜರ್ ಕಿರಣ್ ವಿರುದ್ಧ ಬಾಗಲೂರು ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.

ನಿನ್ನೆ ಬಾಗಲೂರಿನಲ್ಲಿ ರಣಂ ಚಿತ್ರದ ಶೂಟಿಂಗ್ ವೇಳೆ ಸಿಲಿಂಡರ್ ಸ್ಫೋಟಗೊಂಡು ಸುಮೇರಾ (29), ಹಾಗೂ ಆಕೆಯ ಮಗಳು ಅಹೇರಾ (8) ಸ್ಥಳದಲ್ಲೇ ಮೃತಪಟ್ಟಿದ್ದರು. ಘಟನೆಯಲ್ಲಿ ಗಾಯಗೊಂಡ ಮತ್ತೊಬ್ಬ ಮಗುವನ್ನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದುರಂತ ನಡೆಯುತ್ತಿದ್ದಂತೆ ಚಿತ್ರತಂಡ ಸ್ಥಳದಿಂದ ಪರಾರಿಯಾಗಿತ್ತು. ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ರಣಂ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಹಾಗೂ ಆ ದಿನಗಳು ಖ್ಯಾತಿಯ ಚೇತನ್ ನಟಿಸುತ್ತಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img