Wednesday, September 22, 2021
Homeಜಿಲ್ಲೆಮಂಡ್ಯಮಂಡ್ಯ ಡಿಸಿ ನೋಟೀಸ್ ಗೆ ಸುಮಲತಾ ಖಡಕ್ ಉತ್ತರ

ಇದೀಗ ಬಂದ ಸುದ್ದಿ

ಮಂಡ್ಯ ಡಿಸಿ ನೋಟೀಸ್ ಗೆ ಸುಮಲತಾ ಖಡಕ್ ಉತ್ತರ

ಮಂಡ್ಯ ಜಿಲ್ಲಾಧಿಕಾರಿ ನೋಟಿಸ್‍ಗೆ ಪಕ್ಷೇತರ ಅಭ್ಯರ್ಥಿ ಸುಮಲತಾ ಲಿಖಿತ ಉತ್ತರ ನೀಡಿದ್ದಾರೆ. ನಿಮ್ಮ ತಪ್ಪು ಮುಚ್ಚಿಕೊಳ್ಳಲು ನನಗೆ ನೋಟಿಸ್ ನೀಡಿದ್ದೀರಿ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಚುನಾವಣಾಧಿಕಾರಿಗಳನ್ನು ಮನೆಗೆ ಕರೆಸಿಕೊಂಡು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಒತ್ತಡ ಹೇರಿದ್ದಾರೆ ಎಂಬ ಸುಮಲತಾ ಹೇಳಿಕೆಯನ್ನು ಪ್ರಶ್ನಿಸಿ ಮಂಡ್ಯ ಜಿಲ್ಲಾಧಿಕಾರಿ  ಮಂಜುಶ್ರೀ, ಸುಮಲತಾಗೆ ನೋಟಿಸ್ ನೀಡಿದ್ದರು. ಈ ನೋಟಿಸ್‍ಗೆ ಉತ್ತರ ನೀಡಿರುವ ಸುಮಲತಾ, ನಾನು ಹೇಳಿರುವ ಮಾತುಗಳೆಲ್ಲ ವಾಸ್ತವಾಂಶಕ್ಕೆ ಅನುಗುಣವಾಗಿವೆ. ನಿಖಿಲ್ ನಾಮಪತ್ರ ಅರ್ಜಿ ಪರಿಶೀಲನೆಯ ವಿಡಿಯೋ ಕೇಳಿದರೆ ನೀವು ಒಂದು ತುಣುಕು ಮಾತ್ರ ಕೊಟ್ಟಿದ್ದೀರಿ ಇದು ಕರ್ತವ್ಯಲೋಪವಲ್ಲವೇ? ಎಂದು ಜಿಲ್ಲಾಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ನಿಮ್ಮ ತಪ್ಪು ಮುಚ್ಚಿಕೊಳ್ಳಲು ನನಗೆ ನೋಟಿಸ್ ನೀಡಿದ್ದೀರಿ. ನನ್ನ ವಿರುದ್ಧ ಕ್ರಮ ಕೈಗೊಳ್ಳುವ ಯಾವುದೇ ಅಪರಾಧ ನಾನು ಮಾಡಿಲ್ಲ. ತಾವು ನೀಡಿರುವ ನೋಟಿಸ್ ಕಾನೂನು ಬಾಹಿರವಾಗಿದೆ ಎಂದು ಖಡಕ್ ಉತ್ತರ ನೀಡಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img