Sunday, May 16, 2021
Homeಕ್ರೈಂ ನ್ಯೂಸ್ಬೆಂಗಳೂರಿನಲ್ಲಿ ಫೈರಿಂಗ್ – ಸೈಕೋ ರಾಜೇಂದ್ರ ಅರೆಸ್ಟ್

ಇದೀಗ ಬಂದ ಸುದ್ದಿ

ಬೆಂಗಳೂರಿನಲ್ಲಿ ಫೈರಿಂಗ್ – ಸೈಕೋ ರಾಜೇಂದ್ರ ಅರೆಸ್ಟ್

ಬೆಂಗಳೂರಿನಲ್ಲಿ ಮತ್ತೆ ಪೊಲೀಸ್ ಫೈರಿಂಗ್  ನಡೆದಿದೆ. ಕೋಣನಕುಂಟೆ ನಾರಾಯಣಪುರದಲ್ಲಿ ಕುಮಾರ್  ಸ್ವಾಮಿ ಲೇಔಟ್  ಪೊಲೀಸರಿಂದ ರೌಡಿಯೊಬ್ಬನ  ಮೇಲೆ ಫೈರಿಂಗ್ ನಡೆಸಿದ್ದಾರೆ.  ರಾಜೇಂದ್ರ   ಅಲಿಯಾಸ್ ಬೆಂಕಿ ರಾಜ ಅಲಿಯಾಸ್ ಸೈಕೋ     ಎಂಬುವವನಿಗೆ ಗುಂಡೇಟು ತಗುಲಿದೆ. ಇನ್ಸ್ ಪೆಕ್ಟರ್ ಹಜರೇಶ್ ಕಿಲ್ಲೇದಾರ್  ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಕುಮಾರಸ್ವಾಮಿ ಲೇಔಟ್ ಎಟಿಎಂ ಕಾವಲುಗಾರ     ಲಿಂಗಪ್ಪ    ಎಂಬುವನನ್ನು ಕೊಲೆ ಮಾಡಿ ಪರಾರಿಯಾಗಿದ್ದ  ರಾಜೇಂದ್ರನ ಮೇಲೆ ಮೂರು 307 , 302 ಕೇಸ್ ಗಳು ದಾಖಲಾಗಿವೆ.  

   ಈ ಸೈಕೋ ತನ್ನ ತಂಗಿಯನ್ನೇ ಕೊಲೆಗೈದಿದ್ದ    ಬಸವನಗುಡಿಯಲ್ಲಿ  ಗಾರೆ ಕೆಲಸದ ಮೇಸ್ತ್ರಿಯನ್ನು ಕೊಲೆಗೈದಿದ್ದ. ಖಚಿತ ಮಾಹಿತಿ ಮೇರೆಗೆ ಕುಮಾರಸ್ವಾಮಿ ಲೇಔಟ್ ಪೊಲೀಸರು, ರಾಜೇಂದ್ರ ಬಂಧನಕ್ಕೆ ತೆರಳಿದ್ದರು. ಈ ವೇಳೆ, ಆತ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ. ಪ್ರಾಣ ರಕ್ಷಣೆಗಾಗಿ ಪೊಲೀಸರು ಈತನ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img