Wednesday, September 22, 2021
Homeಜಿಲ್ಲೆಮಂಡ್ಯಪ್ರಚಾರದ ನಡುವೆ ಗದ್ದೆಗಿಳಿದು ನಾಟಿ ಮಾಡಿದ ನಿಖಿಲ್ ಕುಮಾರಸ್ವಾಮಿ !

ಇದೀಗ ಬಂದ ಸುದ್ದಿ

ಪ್ರಚಾರದ ನಡುವೆ ಗದ್ದೆಗಿಳಿದು ನಾಟಿ ಮಾಡಿದ ನಿಖಿಲ್ ಕುಮಾರಸ್ವಾಮಿ !

ಮುಖ್ಯಮಂತ್ರಿ ಕುಮಾರಸ್ವಾಮಿ ಬಳಿಕ ಇದೀಗ ಅವರ ಪುತ್ರ, ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ  ಗದ್ದೆಗಿಳಿದು ನಾಟಿ ಮಾಡಿದ್ದಾರೆ.  ಮಂಡ್ಯ ಜಿಲ್ಲೆಯ ಆತಗೂರಲ್ಲಿ ಟಿ.ರಾಮಯ್ಯ ಅನ್ನೋರ ಗದ್ದೆಯಲ್ಲಿ ನಿಖಿಲ್ ನಾಟಿ ಮಾಡಿದ್ದಾರೆ. ಈ ಮೂಲಕ  ರೈತರನ್ನು ಸೆಳೆಯಲು ನಿಖಿಲ್ ಯತ್ನಿಸುತ್ತಿದ್ದಾರೆ. ಈ ಹಿಂದೆ ಸಿಎಂ ಕುಮಾರಸ್ವಾಮಿ ಮಂಡ್ಯ ಗದ್ದೆಯಲ್ಲಿ ನಾಟಿ ಮಾಡಿದ್ದರು.

ನಿಖಿಲ್ ಮದ್ದೂರು ಭಾಗದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಈ ವೇಳೆ ಪಕ್ಕದ ಗದ್ದೆಯಲ್ಲಿ ರೈತರು ಗದ್ದೆ ನಾಟಿ ಮಾಡುತ್ತಿದ್ದರು. ಇದನ್ನು ಗಮನಿಸಿದ ನಿಖಿಲ್ ತಾವೂ ಅವರೊಂದಿಗೆ ಸೇರಿ ನಾಟಿ ಮಾಡಿದ್ದಾರೆ.  ಒಟ್ಟಿನಲ್ಲಿ ಮಂಡ್ಯದಲ್ಲಿ ಚುನಾವಣಾ ಕಣ ರಂಗೇರುತ್ತಿದ್ದು, ಅಭ್ಯರ್ಥಿಗಳು ಹೇಗಾದ್ರೂ ಮಾಡಿ ಗೆಲ್ಲಬೇಕೆಂಬ ಪಣ ತೊಟ್ಟಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img