Sunday, May 16, 2021
Homeದೇಶಜಮ್ಮುವಿನಲ್ಲಿ ಕಾರು ಸ್ಫೋಟ – ಉಗ್ರರ ಕೈವಾಡ ಶಂಕೆ

ಇದೀಗ ಬಂದ ಸುದ್ದಿ

ಜಮ್ಮುವಿನಲ್ಲಿ ಕಾರು ಸ್ಫೋಟ – ಉಗ್ರರ ಕೈವಾಡ ಶಂಕೆ

ಜಮ್ಮುವಿನ ಬನಿಹಾಲ್​ ಬಳಿಯ ರಂಬಾನ್​ನಲ್ಲಿ ಕಾರು ಸ್ಫೋಟಗೊಂಡಿದೆ. ಕಾರಿನಲ್ಲಿದ್ದ ಸಿಲಿಂಡರ್​ನಲ್ಲಿ ಬೆಂಕಿ ಕಾಣಿಸಿಕೊಂಡು ಸ್ಫೋಟಗೊಂಡಿದೆ ಎನ್ನಲಾಗಿದೆ. ಸಿಆರ್​ಪಿಎಫ್​ ಯೋಧರು ನಿಯೋಜನೆಗೊಂಡಿದ್ದ ಸ್ಥಳದ ಸಮೀಪವೇ ಸ್ಫೋಟ ಸಂಭವಿಸಿದೆ. ಘಟನಾ ಸ್ಥಳಕ್ಕೆ ಸಿಆರ್​ಪಿಎಫ್​ ಯೋಧರು ಹಾಗೂ ಬಾಂಬ್​ ನಿಷ್ಕ್ರಿಯ ದಳ ಅಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

ಸಿಆರ್​ಪಿಎಫ್ ಯೋಧರನ್ನ ಗುರಿಯಾಗಿಸಿಕೊಂಡು ಉಗ್ರರು ಕಾರು ಬ್ಲಾಸ್ಟ್​ ಮಾಡಿರಬಹುದು ಅನ್ನೋ ಶಂಕೆ ವ್ಯಕ್ತವಾಗಿದೆ. ಕಳೆದ ಫೆಬ್ರವರಿ 14 ರಂದು ಸಿಆರ್​ಪಿಎಫ್​ ಯೋಧರನ್ನ ಗುರಿಯಾಗಿಸಿಕೊಂಡು ಜೈಷ್​-ಎ-ಮೊಹಮ್ಮದ್​ ಉಗ್ರರು ದಾಳಿ ನಡೆಸಿದ್ದರು. ಪರಿಣಾಮ 40 ಸೈನಿಕರು ಹುತಾತ್ಮರಾಗಿದ್ದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img