Sunday, May 16, 2021
Homeಜಿಲ್ಲೆಬಾಗಲಕೋಟೆಏಪ್ರಿಲ್ 4ರಂದು ಗದ್ದಿಗೌಡರ್ ನಾಮಪತ್ರ

ಇದೀಗ ಬಂದ ಸುದ್ದಿ

ಏಪ್ರಿಲ್ 4ರಂದು ಗದ್ದಿಗೌಡರ್ ನಾಮಪತ್ರ

ಬಾಗಲಕೋಟೆ ಲೋಕಸಭಾ ಚುನಾವಣೆಗೆ ಬಿಜೆಪಿ  ಅಭ್ಯರ್ಥಿ  ಸಂಸದರಾದ ಪಿ ಸಿ ಗದ್ದಿಗೌಡರ  ಏಪ್ರಿಲ್ 4ರಂದು ನಾಮಪತ್ರ ಸಲ್ಲಿಸಲಿದ್ದಾರೆ.  ಬಾಗಲಕೋಟೆಯ ಕಣವಿ ವೀರಭದ್ರೇಶ್ವರ ದೇವಸ್ಥಾನ ಬಸವೇಶ್ವರ ಕ್ಯಾಂಪಸ್ ನಿಂದ  ಮೆರವಣಿಗೆ ಮುಖಾಂತರ ಟೀಕಿನಮಠ, ಅಡತ ಬಜಾರ ಮಾರ್ಗವಾಗಿ ಪೋಲಿಸ ಚೌಕದಿಂದ ಎಮ್.ಜಿ ರಸ್ತೆಯ ಮಾರ್ಗವಾಗಿ ಬಸವೇಶ್ವರ ಸರ್ಕಲ್ ವರೆಗೆ ತೆರಳಲಿದ್ದಾರೆ.  ನಂತರ ಡಿಸಿ ಕಚೇರಿಗೆ ತೆರಳಿ ನಾಮಪತ್ರ  ಸಲ್ಲಿಸಲಿದ್ದಾರೆ ಎಂದು ಬಿಜೆಪಿ ಬಾಗಲಕೋಟೆ ನಗರ ಮಂಡಲ ಅಧ್ಯಕ್ಷ  ರಾಜು ನಾಯ್ಕರ ಹೇಳಿದ್ದಾರೆ.

ನಾಮಪತ್ರ ಸಲ್ಲಿಸುವ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಲಿದ್ದಾರೆ ಎಂದು ಹೇಳಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img