Sunday, September 19, 2021
Homeಜಿಲ್ಲೆಮಂಡ್ಯಎಳನೀರು ಮಂಡಿಯಲ್ಲಿ ಜನರ ತಾಕತ್ ಪ್ರಶ್ನಿಸಿದ ಮಿನಿಸ್ಟರ್ ತಮ್ಮಣ್ಣ

ಇದೀಗ ಬಂದ ಸುದ್ದಿ

ಎಳನೀರು ಮಂಡಿಯಲ್ಲಿ ಜನರ ತಾಕತ್ ಪ್ರಶ್ನಿಸಿದ ಮಿನಿಸ್ಟರ್ ತಮ್ಮಣ್ಣ

ಮದ್ದೂರು ಎಳನೀರು ಮಾರುಕಟ್ಟೆ ಬಳಿ ಸಚಿವರ  ಸಂಸ್ಕೃತಿ ಅನಾವರಣಗೊಂಡಿದೆ. ಸಚಿವರ ಬಾಯಲ್ಲಿ, ಅಪ್ಪ, ಅಮ್ಮ ಎಲ್ಲಾ ಬಂದು ಹೋಗಿದೆ. ಅಪ್ಪನಿಗೆ ಹುಟ್ಟಿದ್ರೆ ಟೀಕೆ ಮಾಡ್ರೀ ಎಂದು ಡಿ ಸಿ ತಮ್ಮಣ್ಣ ತೊಡೆ ತಟ್ಟಿದ್ದಾರೆ. ಎಳನೀರು ಮಾರುಕಟ್ಟೆ ಒಳಗೆ ಮಜಾ ಮಾಡ್ಕೊಂಡು ಟೀಕೆ ಮಾಡ್ಕೊಂಡು ಇದ್ದಿರಾ. ನೀವೂ ಟೀಕೆ ಮಾಡೋಡ್ನ ಕೇಳಿದ್ದೀನಿ ನಾನು. ತಾಕತ್ತಿದ್ರೆ, ಅಪ್ಪನಿಗೆ ಹುಟ್ಟಿದ್ರೆ ಬಂದು ಎದುರಿಗೆ ನಿಂತು ಟೀಕೆ ಮಾಡ್ಲೀ ಎಂದು ಸಚಿವರು ಸವಾಲೆಸೆದಿದ್ದಾರೆ.

ಎಳನೀರು ಮಾರುಕಟ್ಟೆ ಚರಿತ್ರೆ ನನಗೆ ಗೊತ್ತು. ಹಣ, ಮಜಾ ಮಾಡ್ಕೊಂಡು ಟೀಕೆ ಮಾಡ್ತಿರೇನ್ರೀ. ಅಂತಹವರು ಯಾರಾರು ಇದ್ರೆ ಮುಂದೆ ಬನ್ನಿ. ಕೋಟ್ಯಾಂತರ ರೂಪಾಯಿ ತಂದು ಅಭಿವೃದ್ಧಿ ಮಾಡಿದ್ದೀನಿ. ಯಾರಾದರೂ ತಾಕತ್ ಇದ್ರೆ ಮುಂದೆ ಬಂದು ಟೀಕೆ ಮಾಡ್ಲೀ. ಹಿಂದೆ ನಿಂತು ಮಾತಾಡೋದಲ್ಲ, ಬೈಟ್ ಕೊಡೋದಲ್ಲ ಎಂದು ಸ್ಥಳೀಯರ ವಿರುದ್ಧ ಬಹಿರಂಗವಾಗಿ ತೊಡೆತಟ್ಟಿದ್ದಾರೆ ಸಚಿವ ತಮ್ಮಣ್ಣ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img