Wednesday, September 22, 2021
Homeರಾಜಕೀಯಅಧಿಕಾರಕ್ಕೆ ಬಂದ್ರೆ ನೀತಿ ಆಯೋಗ ರದ್ದು –ಯೋಜನಾ ಆಯೋಗ ಜಾರಿ ಎಂದ ರಾಗಾ

ಇದೀಗ ಬಂದ ಸುದ್ದಿ

ಅಧಿಕಾರಕ್ಕೆ ಬಂದ್ರೆ ನೀತಿ ಆಯೋಗ ರದ್ದು –ಯೋಜನಾ ಆಯೋಗ ಜಾರಿ ಎಂದ ರಾಗಾ

ದೇಶದಲ್ಲಿ ಕಾಂಗ್ರೆಸ್​​ ಅಧಿಕಾರಕ್ಕೆ ಬಂದ್ರೆ ನೀತಿ ಆಯೋಗ ರದ್ದು ಮಾಡಿ ಮತ್ತೆ ಯೋಜನಾ ಆಯೋಗ ಜಾರಿಗೆ ತರುವುದಾಗಿ ಎಐಸಿಸಿ ಅಧ್ಯಕ್ಷ ರಾಹುಲ್​​ ಗಾಂಧಿ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್​​ ಮಾಡಿರುವ ರಾಹುಲ್​ ಗಾಂಧಿ, ನೀತಿ ಆಯೋಗವನ್ನು ಪ್ರಧಾನಿ ನರೇಂದ್ರ ಮೋದಿ ರಚಿಸಿದ್ದು, ಅದಕ್ಕೆ ಯಾವುದೇ ಧ್ಯೇಯವಿಲ್ಲ. ಕೇವಲ ಪ್ರಧಾನಿ ನೀಡುವ ಡೇಟಾವನ್ನು ಮಾರ್ಕೆಟಿಂಗ್‌ಗಾಗಿ ಬಳಸಲಾಗುತ್ತಿದೆ. ನಾವು ಅಧಿಕಾರಕ್ಕೆ ಬಂದರೆ, ಯೋಜನಾ ಆಯೋಗವೆಂದು ಹೆಸರಿಡುವ ಮೂಲಕ, ಆ ಆಯೋಗದಲ್ಲಿ ಸರಾಸರಿ 100 ಮಂದಿ ಆರ್ಥಿಕ ತಜ್ಞರ ಸಿಬ್ಬಂದಿ ನೇಮಿಸಲಾಗುವುದಾಗಿ ಘೋಷಿಸಿದ್ದಾರೆ. ಯೋಜನಾ ಆಯೋಗವನ್ನು 1950ರ ಮಾ.15 ರಂದು ಕಾಂಗ್ರೆಸ್​​ ಜಾರಿಗೆ ತಂದಿತ್ತು. ಜವಾಹರಲಾಲ್ ನೆಹರು ಇದರ ಪ್ರಥಮ ಅಧ್ಯಕ್ಷರಾಗಿದ್ದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img