Sunday, September 19, 2021
Homeಜಿಲ್ಲೆಬೆಂಗಳೂರುಸರ್ಕಾರಿ ನೌಕರರಿಗೆ ಯುಗಾದಿ ಕೊಡುಗೆ

ಇದೀಗ ಬಂದ ಸುದ್ದಿ

ಸರ್ಕಾರಿ ನೌಕರರಿಗೆ ಯುಗಾದಿ ಕೊಡುಗೆ

ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಯುಗಾದಿ ಹಬ್ಬದ ಸಿಹಿ ನೀಡಿದೆ. ತುಟ್ಟಿ ಭತ್ಯೆಯನ್ನು ಶೇ. 3.75ರಿಂದ 6.50ಕ್ಕೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.

ಕೇಂದ್ರ ಸರ್ಕಾರ ನೌಕರರ ತುಟ್ಟಿ ಭತ್ಯೆ ಹೆಚ್ಚಳ ಮಾಡಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವೂ ತನ್ನ ನೌಕರರಿಗೆ ಮೂಲ ವೇತನದ ಶೇ. 2.75ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. 2019 ರ ಜನವರಿ ಯಿಂದಲೇ ಇದು ಪೂರ್ವಾನ್ವಯವಾಗಲಿದೆ.

ಈ ಆದೇಶವು ಸರ್ಕಾರಿ ನೌಕರರು, ಜಿ,ಪಂಗಳಲ್ಲಿ ಕಾರ್ಯ ನಿರ್ವಹಿಸುವ ಪೂರ್ಣಾವಧಿ ನೌಕರರು, ಸರ್ಕಾರದ ಸಹಾಯಧನ ಪಡೆಯುತ್ತಿರುವ ಶಿಕ್ಷಣ ಸಂಸ್ಥೆಗಳ ನೌಕರರು ಹಾಗೂ ವಿವಿಗಳ ಪೂರ್ಣಾವಧಿ ನೌಕರರಿಗೆ ಅನ್ವಯವಾಗಲಿದೆ.

ನೀತಿ ಸಂಹಿತೆ ಹೊತ್ತಲ್ಲೇ ಇದು ಜಾರಿಯಾಗಿರುವುದು ಚರ್ಚೆಗೆ ಗ್ರಾಸವಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img