Wednesday, September 22, 2021
Homeರಾಜಕೀಯಬಿಹಾರ ಮಹಾ ಘಟಬಂಧನ್ ಸೀಟು ಹಂಚಿಕೆ ಫೈನಲ್ – RJD ಗೆ ದಕ್ಕಿದ್ದು 25 ಕ್ಷೇತ್ರ

ಇದೀಗ ಬಂದ ಸುದ್ದಿ

ಬಿಹಾರ ಮಹಾ ಘಟಬಂಧನ್ ಸೀಟು ಹಂಚಿಕೆ ಫೈನಲ್ – RJD ಗೆ ದಕ್ಕಿದ್ದು 25 ಕ್ಷೇತ್ರ

ಬಿಹಾರದಲ್ಲಿ ರಾಜಕೀಯ ಹಗ್ಗಜಗ್ಗಾಟದ ಬಳಿಕ ಮಹಾ ಘಟಬಂಧನ್ (ಮಹಾ ಮೈತ್ರಿಕೂಟ)  ಕೊನೆಗೂ ರಾಜ್ಯದ 40 ಲೋಕಸಭಾ ಸೀಟುಗಳ ಹಂಚಿಕೆಯನ್ನು ಪ್ರಕಟಿಸಿದೆ.

ಸೀಟು ಹಂಚಿಕೆ ಸೂತ್ರದ ಪ್ರಕಾರ ಲಾಲು ಪ್ರಸಾದ್‌ ಯಾದವ್‌ ಅವರ ಆರ್‌ ಜೆ ಡಿಗೆ 20 ಸೀಟುಗಳು ಸಿಕ್ಕಿವೆ. ಇವುಗಳಲ್ಲಿ ಒಂದನ್ನು ಕಟ್ಟಾ ಎಡ ಪಕ್ಷಕ್ಕೆ (CPI(ML)ಗೆ ಕೊಟ್ಟಿದೆ.

ಕಾಂಗ್ರೆಸ್‌ಗೆ 9 ಸೀಟುಗಳು ಸಿಕ್ಕಿವೆ. ಉಪೇಂದ್ರ ಕುಶ್ವಾಹ ಅವರ ಆರ್‌ಎಲ್‌ಎಸ್‌ಪಿಗೆ ಐದು ಸೀಟುಗಳು ದೊರಕಿವೆ. ಜೀತನ್‌ ರಾಮ್‌ ಮಾಂಜಿ ಅವರ ಎಚ್‌ ಎ ಎಂ ಪಕ್ಷಕ್ಕೆ ಮತ್ತು ಮುಕೇಶ್‌ ಸಾಹಿ ಅವರ ವಿಐಪಿ ಪಕ್ಷಕ್ಕೆ ತಲಾ ಮೂರು ಸೀಟುಗಳು ಧಕ್ಕಿವೆ.

ಲಾಲು ಪುತ್ರ ತೇಜಸ್ವಿ ಯಾದವ್‌  ಸುದ್ದಿಗೋಷ್ಠಿಯಲ್ಲಿ  ಸೀಟು ಹಂಚಿಕೆ ಸೂತ್ರವನ್ನು ಪ್ರಕಟಿಸಿದರು.

ಬೇಗುಸರಾಯ್‌ ಕ್ಷೇತ್ರದಿಂದ ತನ್ವೀರ್‌ ಹುಸೇನ್‌ ಅವರನ್ನು ಆರ್‌ ಜೆ ಡಿ ಕಣಕ್ಕೆ ಇಳಿಸಲಿದೆ. ಈ ಕ್ಷೇತ್ರದಲ್ಲಿ ಬಿಜೆಪಿ ನಾಯಕ ಗಿರಿರಾಜ್‌ ಸಿಂಗ್‌ ವಿರುದ್ದ ಸ್ಪರ್ಧಿಸಲಿದ್ದ ಸಿಪಿಐ ನ ಕನ್ಹಯ್ಯ ಕುಮಾರ್‌ ಗೆ ಇದರಿಂದ ಆಘಾತವಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img