Wednesday, September 22, 2021
Homeಸಿನಿಮಾನಿರ್ಮಾಪಕರಿಗೆ ಪಂಗನಾಮ ಹಾಕಿದ ಹಾಟ್ ನಟಿ ಯಾರು ಗೊತ್ತಾ.. ?

ಇದೀಗ ಬಂದ ಸುದ್ದಿ

ನಿರ್ಮಾಪಕರಿಗೆ ಪಂಗನಾಮ ಹಾಕಿದ ಹಾಟ್ ನಟಿ ಯಾರು ಗೊತ್ತಾ.. ?

ಬಾಲಿವುಡ್ ಹಾಟ್ ನಟಿ ಅಮಿಷಾ ಪಟೇಲ್ ನಿರ್ಮಾಪಕರೊಬ್ಬರಿಗೆ ಕೋಟಿ ಕೋಟಿ ಪಂಗನಾಮ ಹಾಕಿದ್ದಾರೆ ಎನ್ನಲಾಗಿದೆ.  ಈ ಸಂಬಂಧ ನಟಿ ವಿರುದ್ಧ ದೂರು ದಾಖಲಾಗಿದೆ.

ದೇಸಿ ಮ್ಯಾಜಿಕ್ ಚಿತ್ರದ ನಿರ್ಮಾಪಕ ಅಜಯ್ ಕುಮಾರ್ ಸಿಂಗ್ ಅವರಿಗೆ ಅಮಿಷಾ ಪಟೇಲ್ 2.5 ಕೋಟಿ ರುಪಾಯಿ ಪಂಗನಾಮ ಹಾಕಿದ್ದಾರೆ ಎನ್ನಲಾಗಿದೆ. ರಾಂಚಿಯಲ್ಲಿ ಅಮಿಷಾ ತನ್ನ ಬ್ಯುಸಿನೆಸ್ ಪಾರ್ಟನರ್ ಕುನಾಲ್ ಗೂಮರ್ ಜತೆ ಅಜಯ್ ಅವರನ್ನು ಭೇಟಿ ಮಾಡಿದ್ದರಂತೆ. ಈ ವೇಳೆ ದೇಸಿ ಮ್ಯಾಜಿಕ್ ಚಿತ್ರದ ಚಿತ್ರೀಕರಣ ಹಣಕಾಸಿನ ಕೊರತೆಯಿಂದ ಅರ್ಧಕ್ಕೆ ನಿಂತಿದ್ದು ನೀವು ಫೈನಾನ್ಸ್ ಮಾಡಿ ಎಂದು ಕೇಳಿಕೊಂಡಿದ್ದರು. ಅಮಿಷಾ ಮಾತಿನಂತೆ ಅಜಯ್ 2.5 ಕೋಟಿ ರುಪಾಯಿ ಕೊಟ್ಟಿದ್ದಾರೆ.  ಸಿನಿಮಾ ಇನ್ನೂ ತೆರೆಗೆ ಬಂದಿಲ್ಲ. ಇತ್ತ ಅಜಯ್ ಸಿಂಗ್  ಹಣ ಕೂಡ ವಾಪಸ್ ಆಗಿಲ್ಲ. ಇದರಿಂದ ಕಂಗಲಾದ ಅಜಯ್ ಅಮಿಷಾಗೆ ಕರೆ ಮಾಡಿ ವಿಚಾರಿಸಿದ್ದಾರೆ. ಅಸಲು ಬಡ್ಡಿ ಸೇರಿ 3 ಕೋಟಿ ರುಪಾಯಿ ಚೆಕ್ ನ್ನ ಅಜಯ್ ಗೆ ಅಮಿಷಾ ನೀಡಿದ್ದಾರೆ.  ಈ ಚೆಕ್ ಕೂಡ ಬೌನ್ಸ್ ಆಗಿದೆ. ಅಜಯ್ ರಾಂಚಿ ಕೋರ್ಟ್ ನಲ್ಲಿ ನಟಿ ವಿರುದ್ಧ ದೂರು ನೀಡಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img