Wednesday, September 22, 2021
Homeಜಿಲ್ಲೆಮಂಡ್ಯನಿಖಿಲ್ ಗೆ ಸಂಕಷ್ಟ : ಮಂಡ್ಯದಲ್ಲಿ ಕೇಂದ್ರ ಅಧಿಕಾರಿಗಳ ತನಿಖೆ

ಇದೀಗ ಬಂದ ಸುದ್ದಿ

ನಿಖಿಲ್ ಗೆ ಸಂಕಷ್ಟ : ಮಂಡ್ಯದಲ್ಲಿ ಕೇಂದ್ರ ಅಧಿಕಾರಿಗಳ ತನಿಖೆ

ಮಂಡ್ಯ :  ನಿಖಿಲ್ ಕುಮಾರಸ್ವಾಮಿ ನಾಮಪತ್ರ ಅಸಿಂಧುವಾಗುತ್ತಾ?  ಅನ್ನೋವ ಆತಂಕ ಜೆಡಿಎಸ್ ಪಾಳಯದಲ್ಲಿ ಆವರಿಸಿದೆ. ನಿನ್ನೆ ಹಳೇ ಮಾದರಿಯಲ್ಲಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿಯೇ ಮಂಡ್ಯ ಜಿಲ್ಲಾಧಿಕಾರಿ ನಿಕಿಲ್ ಕುಮಾರಸ್ವಾಮಿ ಕರೆಸಿ ಹೊಸ ನಾಮಪತ್ರ ಸ್ವೀಕರಿಸಿದ್ದರು. ಇದರ ವಿರುದ್ಧ ಸುಮಲತಾ ಅಂಬರೀಷ್ ಬೆಂಬಲಿಗರು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.

ಅವಧಿ ಮುಗಿದ ಬಳಿಕ, ಕಾನೂನು ಬಾಹಿರವಾಗಿ ಹೊಸ ಮಾದರಿ ನಾಮಪತ್ರವನ್ನು ಜಿಲ್ಲಾಧಿಕಾರಿ ಸ್ವೀಕರಿಸಿದ್ದಾರೆ ಎಂದು ಆರೋಪಿಸಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ನಿಕಿಲ್ ನಾಮಪತ್ರ ಅಸಿಂಧುಗೊಳಿಸಬೇಕು ಎಂದು ದೂರಿನಲ್ಲಿ ಸುಮಲತಾ ಅಂಬರೀಶ್ ಬೆಂಬಲಿಗರು ಆಗ್ರಹಿಸಿದ್ದಾರೆ.

ಇದೀಗ ಕೇಂದ್ರ ಚುನಾವವಣಾ ಅಧಿಕಾರಿಗಳು ಮಂಡ್ಯಕ್ಕೆ ಆಗಮಿಸಿ, ದೂರುದಾರರ ಜೊತೆ ಗೌಪ್ಯವಾಗಿ ಚರ್ಚೆ ನಡೆಸಿದ್ದಾರೆ. ಇದೀಗ ಜೆಡಿಎಸ್ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿಗೆ, ಪುತ್ರನ ನಾಮಪತ್ರ ಅಸಿಂಧುವಾಗೋ ಆತಂಕ ಎದುರಾಗಿದೆ. ಇಷ್ಟೇ ಅಲ್ಲ ನಿಯಮ ಉಲ್ಲಂಘಿಸಿರುವ ಆರೋಪ ಎದುರಿಸುತ್ತಿರುವ ಮಂಡ್ಯ ಜಿಲ್ಲಾಧಿಕಾರಿ ಮಂಜುಳ ಅವರ ತಲೆದಂಡವಾಗೋ ಸಾಧ್ಯತೆಯೂ ಇದೆ.

ನಿಖಿಲ್‌ ನಾಮಪತ್ರ ಸಲ್ಲಿಕೆಯಲ್ಲಿ ಹಲವು‌‌ ದೋಷಗಳು ಇರುವುದರಿಂದ  ಸಿಎಂ ಪುತ್ರ ನಿಖಿಲ್ ರವರು ಚುನಾವಣೆಯಿಂದ ಅನರ್ಹಗೊಂಡರೂ ಆದರೂ ಅಚ್ಚರಿಯೇನಿಲ್ಲ

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img