Wednesday, September 22, 2021
Homeಜಿಲ್ಲೆಕೋಲಾರಕಾರ್ಯಕರ್ತರು ಒಪ್ಪಿದರೆ ಮಾತ್ರ ಕಾಂಗ್ರೆಸ್ ಗೆ ಬೆಂಬಲ - ಜೆಡಿಎಸ್

ಇದೀಗ ಬಂದ ಸುದ್ದಿ

ಕಾರ್ಯಕರ್ತರು ಒಪ್ಪಿದರೆ ಮಾತ್ರ ಕಾಂಗ್ರೆಸ್ ಗೆ ಬೆಂಬಲ – ಜೆಡಿಎಸ್

ಬೆಂಬಲಿಸುವುದಾಗಿ ಮುಳಬಾಗಲು ತಾಲ್ಲೂಕು  ಜೆಡಿಎಸ್ ಮುಖಂಡರು ಘೋಷಿಸಿದ್ದಾರೆ.  ಲೋಕಸಭಾ  ಚುನಾವಣೆ ಸಂಬಂಧ ಮುಳಬಾಗಲು ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲು ಕರೆಯಲಾಗಿದ್ದ ಜೆಡಿಎಸ್ ಸಭೆಯಲ್ಲಿ ಮುಖಂಡರು ಮಾತನಾಡಿದ್ರು. ತಾಲ್ಲೂಕು ಅಧ್ಯಕ್ಷ ಕಡೇನಹಳ್ಳಿ ನಾಗರಾಜ್, ಮಾಜಿ ಅಧ್ಯಕ್ಷ ಅಲಂಗೂರು ಶಿವಣ್ಣ ಹಾಗೂ ಮುಖಂಡ ಸಮೃದ್ಧಿ ಮಂಜುನಾಥ್ ಮಾತನಾಡಿ, ಮೈತ್ರಿ ದರ್ಮ ಪಾಲನೆಯಾಗುವುದು ಸರಿಯಷ್ಟೆ, ಆದ್ರೆ ಕಾರ್ಯಕರ್ತರು ಒಪ್ಪಿದ್ರೆ ಮಾತ್ರ ಕಾಂಗ್ರೆಸ್ ಅಭ್ಯರ್ಥಿಯನ್ನ ಬೆಂಬಲಿಸುವುದಾಗಿ ಮುಖಂಡರು ಒಮ್ಮತದ ತೀರ್ಮಾನಕ್ಕೆ ಬಂದ್ರು. ಇನ್ನೂ ಇದೆ ವೇಳೆ ಜೆಡಿಎಸ್ ಅಸ್ತಿತ್ವ ಉಳಿಯಬೇಕಾದ್ರೆ, ಕಾರ್ಯಕರ್ತರ ನಿರ್ಧಾರ ಪ್ರಮುಖವಾಗಿದ್ದು, ಕಾರ್ಯಕರ್ತರು ಮುಖಂಡರು, ಜೆಡಿಎಸ್ ಅಭಿಮಾನಿಗಳು ಒಪ್ಪಿದ್ರೆ ಕಾಂಗ್ರೆಸ್ ಅಭ್ಯರ್ಥಿ ಮುನಿಯಪ್ಪ ಅವರನ್ನ ಬೆಂಬಲಿಸುವುದಾಗಿ ಮುಖಂಡ ಸಮೃದ್ದಿ ಮಂಜುನಾಥ್ ತಿಳಿಸಿದ್ರು. ಈ ವೇಳೆ  ತಾಲ್ಲೂಕಿನ  ನೂರಾರು  ಜೆಡಿಎಸ್ ಮುಖಂಡರು ಕಾರ್ಯಕರ್ತರು ಹಾಜರಿದ್ರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img