Wednesday, September 22, 2021
Homeಜಿಲ್ಲೆಚಿಕ್ಕಬಳ್ಳಾಪುರಎತ್ತಿನಹೊಳೆ ಕಾಸು ಹೊಡೆಯುವ ಯೋಜನೆ; ಮೊಯ್ಲಿ ವಿರುದ್ಧ ಶರತ್ ಬಚ್ಚೇಗೌಡ ವಾಗ್ದಾಳಿ

ಇದೀಗ ಬಂದ ಸುದ್ದಿ

ಎತ್ತಿನಹೊಳೆ ಕಾಸು ಹೊಡೆಯುವ ಯೋಜನೆ; ಮೊಯ್ಲಿ ವಿರುದ್ಧ ಶರತ್ ಬಚ್ಚೇಗೌಡ ವಾಗ್ದಾಳಿ

ಎತ್ತಿನಹೊಳೆ ಕಾಸು ಹೊಡೆಯುವ ಯೋಜನೆಯೇ ಹೊರತು ಬಯಲುಸೀಮೆಗೆ ನೀರು ನೀಡುವ ಯೋಜನೆಯಾಗಿಲ್ಲ. ಚುನಾಚವಣಾ ಅಸ್ತ್ರವಾಗಿ ಮೊಯ್ಲಿ ಅವರು ಯೋಜನೆಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಶರತ್‌ ಬಚ್ಚೇಗೌಡ ಟೀಕಿಸಿದರು.

ಅವರು ದೊಡ್ಡಬಳ್ಳಾಪುರ ತಾಲೂಕಿನ ರಾಜಘಟ್ಟ ಶ್ರೀಆಂಜನೇಯಸ್ವಾಮಿ ದೇವಾಲಯದ ಸಮೀಪದ ವಿಶ್ವಕುಂಡಲಿ ಆಶ್ರಮದಲ್ಲಿ ನಡೆದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಾಲ್ಮೀಕಿ ಸಮುದಾಯದ ಬಿಜೆಪಿ ಮುಖಂಡರ ಸಭೆಯಲ್ಲಿ ಮಾತನಾಡುತಿದ್ದರು.

ಬಿಜೆಪಿ ಸರ್ಕಾರದಲ್ಲಿ 9 ಸಾವಿರ ಕೋಟಿ ಹಣವನ್ನು ಎತ್ತಿನಹೊಳೆ ಯೋಜನೆಗೆ ಮೀಸಲಿಟ್ಟಿದ್ದರು. ಆ ಹಣವನ್ನು ಮತಗಳ ಬೇಟೆಗಾಗಿ ಸಾಮಾಜಿಕ ಕಲ್ಯಾಣ ಇಲಾಖೆಗೆ ನೀಡಿದ್ದು, ಹಣವನ್ನು ಹೊಡೆಯುವ ಯೋಜನೆಯನ್ನು ಮಾಡಿಕೊಂಡಿದ್ದಾರೆ. ಮಾರ್ಚ್ ತಿಂಗಳಲ್ಲೆ ನೀರಿನ ಅಭಾವ ಆರಂಭವಾಗಿದೆ ಇನ್ನು ಜುಲೈನಲ್ಲಿ ಮಳೆಯಾಗುವ ವರೆಗೂ ಕ್ಷೇತ್ರದಲ್ಲಿ ಜಲ ಕ್ಷಾಮ ಎದುರಾಗಲಿದೆ. ಇಂತಹ ಪರಿಸ್ಥಿತಿ ಇದ್ದರೂ ಶಾಶ್ವತ ನೀರಾವರಿ ನೀಡುವಲ್ಲಿ ವೀರಪ್ಪಮೋಯ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ಅಲ್ಲದೆ ಕಳೆದ ಹತ್ತು ವರ್ಷದಲ್ಲಿ ಕೇಂದ್ರ ಸಚಿವರಾಗಿದ್ದರು ಕ್ಷೇತ್ರದ ಬಯಲು ಸೀಮೆ ಜನರ ಬದುಕು ದುಸ್ಥರವಾಗಿದೆ. ಈ ನಿಟ್ಟಿನಲ್ಲಿ ಕೈಗಾರಿಗಳ ನಿರ್ಮಾಣ ಸೇರಿದಂತೆ ಯಾವುದೇ ಭವಿಷ್ಯದ ಯೋಜನೆ ಮೂಲಕ ಉದ್ಯೋಗ ಸೃಷ್ಠಿ ಮಾಡಲು ಮುಂದಾಗದೆ ಇರುವ ಮೋಯ್ಲಿಗೆ ಈ ಭಾರಿ ಸೋಲು ಖಚಿತವಾಗಿದೆ ಎಂದರು. 

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img