Sunday, June 13, 2021
Homeಸಿನಿಮಾಸಿನಿಮಾ ಶೂಟಿಂಗ್ ವೇಳೆ ಅಪಘಾತ- ಸಾಹಸ ದೃಶ್ಯ ಚಿತ್ರೀಕರಣದ ವೇಳೆ ನಟನಿಗೆ ಗಂಭೀರ ಗಾಯ

ಇದೀಗ ಬಂದ ಸುದ್ದಿ

ಸಿನಿಮಾ ಶೂಟಿಂಗ್ ವೇಳೆ ಅಪಘಾತ- ಸಾಹಸ ದೃಶ್ಯ ಚಿತ್ರೀಕರಣದ ವೇಳೆ ನಟನಿಗೆ ಗಂಭೀರ ಗಾಯ

ತಮಿಳು ನಟ ವಿಶಾಲ್ ಸಿನಿಮಾ ಶೂಟಿಂಗ್ ವೇಳೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಟರ್ಕಿಯಲ್ಲಿ ಶೂಟಿಂಗ್ ನಡೆಯುತ್ತಿದ್ದು, ಸಾಹಸ ದೃಶ್ಯ ಚಿತ್ರೀಕರಣದ ವೇಳೆ ಬೈಕಿನಿಂದ ಬಿದ್ದು ಗಾಯಗೊಂಡಿದ್ದಾರೆ ಎನ್ನಲಾಗಿದೆ.  ವಿಶಾಲ್ ಅವರ ಎಡಗೈ ಹಾಗೂ ಎಡಗಾಲಿಗೆ ಗಾಯವಾಗಿದ್ದು, ಚಿಕಿತ್ಸೆ ಪಡೆದ ಬಳಿಕ ಕನಿಷ್ಠ 2 ವಾರಗಳ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ ಎನ್ನಲಾಗಿದೆ. ಸಿನಿಮಾ ಶೂಟಿಂಗ್ ಪೂರ್ಣಗೊಂಡ ಬಳಿಕವೇ ಚಿತ್ರತಂಡ ವಾಪಸ್ ಆಗಲಿದೆ. ವಿಶಾಲ್ ಶೀಘ್ರವಾಗಿ ಚೇತರಿಸಿಕೊಳ್ಳುವ ನಿರೀಕ್ಷೆಯನ್ನು ಚಿತ್ರತಂಡ ವ್ಯಕ್ತಪಡಿಸಿದೆ. ಇತ್ತೀಚೆಗಷ್ಟೇ ತಮ್ಮ ಬಹುದಿನಗಳ ಗೆಳತಿ ಅಶಿಷಾ ರೆಡ್ಡಿರೊಂದಿಗೆ ವಿಶಾಲ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img