Wednesday, September 22, 2021
Homeಜಿಲ್ಲೆಬೆಂಗಳೂರುಬಿಸಿಲು ಜಾಸ್ತಿ, ಎಳನೀರು ಕಾಸ್ಟ್ಲಿ –ಜನರ ಸ್ಥಿತಿ ಹರೋಹರ

ಇದೀಗ ಬಂದ ಸುದ್ದಿ

ಬಿಸಿಲು ಜಾಸ್ತಿ, ಎಳನೀರು ಕಾಸ್ಟ್ಲಿ –ಜನರ ಸ್ಥಿತಿ ಹರೋಹರ

ಬೆಂಗಳೂರು: ಕರ್ನಾಟಕ ರಾಜ್ಯ ರಾಜಧಾನಿಯಲ್ಲಿ  ಬಿಸಿಲಿನ  ತಾಪ ತಾರಕಕ್ಕೆ ಏರಿದೆ ಸದ್ಯ ಬೆಂಗಳೂರಿನ  ಜನರು  ಸೂರ್ಯನ ಬಿಸಿಲಿನ ಹೊಡೆತಕ್ಕೆ  ಎಳನೀರಿನ ಮೊರೆ ಹೋಗಿದ್ದಾರೆ.

ರಾಜಧಾನಿಯಲ್ಲಿ  ಬಿಸಿಲಿನ  ತಾಪಮಾನದ ಪ್ರಖರತೆ ಕೊಂಚ  ಹೆಚ್ಚಾಗಿಯೇ ಇದೆ. ಫೆಬ್ರವರಿ  ತಿಂಗಳಿನಿಂದಲೇ ಬಿಸಿಲಿನ ಧಗೆ ಹೆಚ್ಚಾಗಿದೆ. ಬೆಳಿಗ್ಗೆ  ವೇಳೆಯೇ ಮನೆಯಿಂದ ಹೊರ ಬರಲು ಜನ ಹಿಂಜರಿಯುತ್ತಾರೆ. ಬಿಸಿಲಿನ ತಾಪಮಾನದಿಂದ ದೇಹ ತಂಪಾಗಿಸಲು  ಐಸ್​ಕ್ರೀಂ,  ಕಬ್ಬಿನ ಹಾಲು,  ಸೋಡಾ, ಶರಬತ್, ಹಣ್ಣುಗಳ ಸೇವನೆಯ ಜೊತೆಗೆ ವಿವಿಧ ಪಾನೀಯಗಳ ಸೇವನೆಗೆ ಮುಂದಾಗುತ್ತಾರೆ.  ಅದರಲ್ಲಿ ಎಳನೀರು ಮೊದಲನೇ ಸಾಲಿನಲ್ಲಿ ಬರುತ್ತದೆ.

ಎಳನೀರು ದೇಹಕ್ಕೆ ತಂಪು ನೀಡುವುದರ ಜೊತೆಗೆ ಅದರಲ್ಲಿ ವಿವಿಧ ಖನಿಜ, ಲವಣ ಮತ್ತು ಸಕ್ಕರೆಯ ಅಂಶ ವಿರುವುದರಿಂದ ಇದನ್ನು ಅಮೃತ ಸಮಾನ ಪಾನೀಯ ಎಂದು ವೈದ್ಯರೇ ಹೇಳುತ್ತಾರೆ. ಹಾಗಾಗಿ  ಬಿಸಿಲಿನಿಂದ  ಬಸವಳಿದ  ಜನರು ಎಳನೀರು ಸೇವನೆಗೆ ಮುಂದಾಗುತ್ತಿದ್ದಾರೆ. ಇದರಿಂದ ಎಳನೀರಿನ ಬೇಡಿಕೆ ಹೆಚ್ಚಾಗಿ ಬೆಲೆ ಗಗನಕ್ಕೇರಿದೆ.

ಬೆಳಿಗ್ಗೆ 10 ಗಂಟೆಯಾದರೆ ಸಾಕು ಸೂರ್ಯನ ತಾಪ ನೆತ್ತಿಯ ಮೇಲೆ ಏರಿ ತನ್ನ ಪ್ರಭಾವ ತೋರಿಸುತ್ತಾನೆ.‌ ಇದರಿಂದ ಜನರು ಪದೇ ಪದೇ ಬಾಯಾರಿಕೆಯಾಗಿ ತಣ್ಣನೆಯ ನೀರು, ವಿವಿಧ ಪಾನೀಯದ ಜೊತೆಗೆ ಎಳನೀರು ಕುಡಿದು ತಮ್ಮ ದಾಹ ತೀರಿಸಿಕೊಳ್ಳುತ್ತಿದ್ದಾರೆ.  ನಗರದಲ್ಲಿ  ಕೆಲವೆಡೆ  ಕಂಡು ಬರುತ್ತಿದ್ದ ಎಳನೀರು ಮಳಿಗೆಗಳು ಈಗ ನಗರದ ಪ್ರಮುಖ ರಸ್ತೆ ಬದಿಯ ಫುಟ್​​​​ಪಾತ್​​​ಗಳಲ್ಲಿಯೂ ಮಾರಾಟ ಮಾಡುವುದು ಕಂಡು ಬರುತ್ತಿದೆ.

 ಸಾಮನ್ಯ ದಿನಗಳಲ್ಲಿ ಎಳನೀರಿನ ದರ ಕೇವಲ 25-30 ರೂ. ಇರುತ್ತೆ. ಅದ್ರೆ ಈಗ 35-40 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಈಗ ಬಿಸಿಲಿನ ಕಾವು ಏರುವುದರ ಜೊತೆಗೆ ಎಳನೀರಿನ ದರವೂ ಏರಿಕೆಯಾಗಿ ಜನರಿಗೆ ಶಾಕ್ ನೀಡಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img