Thursday, September 23, 2021
Homeರಾಜ್ಯಪುಟ್ಟರಾಜು, ರೇವಣ್ಣಗೆ ಐಟಿ ಶಾಕ್ – ಮೈತ್ರಿ ಸರಕಾರ ಶೇಕ್

ಇದೀಗ ಬಂದ ಸುದ್ದಿ

ಪುಟ್ಟರಾಜು, ರೇವಣ್ಣಗೆ ಐಟಿ ಶಾಕ್ – ಮೈತ್ರಿ ಸರಕಾರ ಶೇಕ್

ರಾಜ್ಯ ಸಮ್ಮಿಶ್ರ ಸರಕಾರ ಮತ್ತೊಮ್ಮೆ ಶೇಕ್ ಆಗಿದೆ. ಜೆಡಿಎಸ್ ಸಚಿವ, ಸಿಎಂ ಕುಮಾರಸ್ವಾಮಿ ಆಪ್ತ ಸಿಎಸ್ ಪುಟ್ಟರಾಜು ಅವರ ನಿವಾಸ ಮತ್ತು ಕಚೇರಿಗಳ ಮೇಲೆ ಐಟಿ ದಾಳಿ ನಡೆದಿದೆ. ಬೆಳ್ಳಂಬೆಳಗ್ಗೆ 5.30ರ ವೇಳೆಗೆ ಐಟಿ ಅಧಿಕಾರಿಗಳು ಏಕಕಾಲಕ್ಕೆ ಬೆಂಗಳೂರು ಮತ್ತು  ಮಂಡ್ಯದಲ್ಲಿ  ದಾಳಿ ನಡೆಸಿದ್ದಾರೆ. ಪುಟ್ಟರಾಜು ಅವರ ಸಂಬಂಧಿಕರ ನಿವಾಸಗಳ ಮೇಲೂ ದಾಳಿ ನಡೆದಿದೆ.

ನಿನ್ನೆ ರಾತ್ರಿ ತುರ್ತು ಸುದ್ದಿಗೋಷ್ಟಿ ನಡೆಸಿದ್ದ ಕುಮಾರಸ್ವಾಮಿ ತಮ್ಮ ಬೆಂಬಲಿಗರ ಮೇಲೆ ಐಟಿ ದಾಳಿ ನಡೆಯಲಿದೆ ಎಂದು  ಹೇಳಿದ್ದರು. ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪುಟ್ಟರಾಜು ಅವರು ಇದು ಬಿಜೆಪಿಯ  ಕುತಂತ್ರ. ಮಂಡ್ಯದಲ್ಲಿ ಈ ರೀತಿಯ ರಾಜಕಾರಣ ನಡೆಯುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ. ಐಟಿ ಅಧಿಕಾರಿಗಳು ಬಿಜೆಪಿ ಏಜೆಂಟರಂತೆ ಕೆಲಸ ಮಾಡಬಾರದು ಎಂದು ಅವರು ಹೇಳಿದ್ದಾರೆ.

ಇತ್ತ ಹೆಚ್ ಡಿ ರೇವಣ್ಣರ ಆಪ್ತ ಉದ್ಯಮಿಗಳ ಮೇಲೂ ದಾಳಿ ನಡೆದಿದೆ.  ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗ್ತಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img