Wednesday, September 22, 2021
Homeರಾಜ್ಯದೇವೇಗೌಡರನ್ನ ಮುಟ್ಟಿದ್ರೆ ಯಾರಿಗೂ ಉಳಿಗಾಲವಿಲ್ಲ –ಇದು ಮೋದಿ, ಬಿಜೆಪಿಯ ಅಂತ್ಯಕಾಲ – ಗುಡುಗಿದ ರೇವಣ್ಣ

ಇದೀಗ ಬಂದ ಸುದ್ದಿ

ದೇವೇಗೌಡರನ್ನ ಮುಟ್ಟಿದ್ರೆ ಯಾರಿಗೂ ಉಳಿಗಾಲವಿಲ್ಲ –ಇದು ಮೋದಿ, ಬಿಜೆಪಿಯ ಅಂತ್ಯಕಾಲ – ಗುಡುಗಿದ ರೇವಣ್ಣ

ಹಾಸನದಲ್ಲಿ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಆಪ್ತರ ಮನೆಗಳ ಮೇಲೆ ಐಟಿ ದಾಳಿ ನಡೆದಿದೆ. ಚನ್ನರಾಯಪಟ್ಟಣ ಹಾಸನ ಸೇರಿ ಮೂರು ಕಡೆ ಐಟಿ ದಾಳಿಯಾಗಿದ್ದು, ಅಶ್ವಥ್ ನಾರಾಯಣ್ ರೆಡ್ಡಿ, ರಾಯಗೌಡ ಸೇರಿದಂತೆ ಒಟ್ಟು ಮೂವರ ಮನೆಗಳ ಮೇಲೆ ದಾಳಿ ನಡೆದಿದೆ.

ಹಾಸನದ ರೇವಣ್ಣ ಅವರ ಪಿಡಬ್ಲ್ಯೂಡಿ ಇಲಾಖೆ ಕಚೇರಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ತಪಾಸಣೆ ನಡೆಸುತ್ತಿದ್ದಾರೆ. 2 ವಾಹನಗಳಲ್ಲಿ 8 ಮಂದಿ ಅಧಿಕಾರಿಗಳ ತಂಡ ಬಂದಿದ್ದು, ಕಡತಗಳನ್ನು ಪರಿಶೀಲನೆ ನಡೆಸುತ್ತಿದೆ.

ಐಟಿ ದಾಳಿ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ರೇವಣ್ಣ, ದೇವೇಗೌಡ್ರು ಕುಟುಂಬವನ್ನ ಐಟಿ ದಾಳಿಯಿಂದ ಹೆದರಿಸುತ್ತೇವೆ ಎಂದುಕೊಂಡಿದ್ರೆ ಅದು ಮೋದಿ ಹಾಗೂ ಬಿಜೆಪಿಯ ಅಂತ್ಯಕಾಲ ಅಂತ ಗುಡುಗಿದ್ದಾರೆ. ಐಟಿ ಇಲಾಖೆಯ ಓರ್ವ ಮುಖ್ಯಸ್ಥ 420.  ದೇವೇಗೌಡ್ರನ್ನ ಮುಟ್ಟಿದ್ರೆ ಯಾರಿಗೂ ಉಳಿಗಾಲವಿಲ್ಲ. ಇದಕ್ಕೆಲ್ಲ ನಾವೇನು ಹೆದರಲ್ಲ ಎಂದು ರೇವಣ್ಣ ಗುಟುರು ಹಾಕಿದ್ದಾರೆ. 

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img