Thursday, September 23, 2021
Homeರಾಜಕೀಯಐಟಿ ರೇಡ್ ಸುಮಲತಾಗೆ ಗೊತ್ತಿತ್ತಾ ?-ಸಿಎಂ ಗಂಭೀರ ಆರೋಪ

ಇದೀಗ ಬಂದ ಸುದ್ದಿ

ಐಟಿ ರೇಡ್ ಸುಮಲತಾಗೆ ಗೊತ್ತಿತ್ತಾ ?-ಸಿಎಂ ಗಂಭೀರ ಆರೋಪ

ಬೆಂಗಳೂರಿನಲ್ಲಿ ಕುಮಾರಸ್ವಾಮಿ –ಸಿದ್ದರಾಮಯ್ಯ ನೇತೃತ್ವದಲ್ಲಿ ಮೈತ್ರಿ ಕಾರ್ಯಕರ್ತರು ಕೇಂದ್ರದ ವಿರುದ್ಧ  ಪ್ರತಿಭಟನೆ  ನಡೆಸಿದ್ದಾರೆ. ಜೆಡಿಎಸ್ ಸಚಿವರು ಮತ್ತು ಅವರ  ಆಪ್ತರ ಮೇಲೆ ಐಟಿ ದಾಳಿ ನಡೆಸಿರುವುದು ರಾಜಕೀಯ ಪ್ರೇರಿತ ಎಂದು ಕುಮಾರಸ್ವಾಮಿ ಪ್ರತಿಪಾದಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಗೆ ಎಲ್ಲವೂ ಗೊತ್ತಿತ್ತಾ ಎಂದು ನೇರವಾಗಿ ಮಂಡ್ಯದಲ್ಲಿ ಕಣಕ್ಕಿಳಿದಿರೋ ಸುಮಲತಾ ಅಂಬರೀಷ್ ವಿರುದ್ಧ ಕುಮಾರಸ್ವಾಮಿ ಬೊಟ್ಟು ಮಾಡಿದ್ದಾರೆ. ನಿನ್ನೆ ಸಂಜೆ ಸುಮಲತಾ ಹೇಳಿಕೆ ನೀಡಿದ್ದರು. ಕೆಲವೇ ನಿಮಿಷಗಳಲ್ಲಿ ದಾಳಿಯಾಗುತ್ತೆ ಅಂತ. ಹಾಗಿದ್ದರೆ ಅವರಿಗೆಲ್ಲಾ ಗೊತ್ತಿತ್ತಾ ಅಂತ ಸಿಎಂ ಪ್ರಶ್ನಿಸಿದ್ದಾರೆ. ಬಾಹ್ಯಾಕಾಶದಲ್ಲಿ ಸ್ಯಾಟಲೈಟ್ ಹೊಡೆದುರುಳಿಸಿರುವುದು ಮಹತ್ಸಾಧನೆಯೇನಲ್ಲ ಅಂತ ಕುಮಾರಸ್ವಾಮಿ ಹೇಳಿದ್ದಾರೆ. ಎಲ್ಲದಕ್ಕೂ ಮೋದಿ ಕ್ರೆಡಿಟ್ ತಗೋತಿದ್ದಾರೆ. ಬಿಜೆಪಿ ನಾಯಕರ ಭ್ರಷ್ಟಾಚಾರವನ್ನು ದಾಖಲೆಸಹಿತ ಬಯಲಿಗೆಳೆಯುವುದಾಗಿ ಕುಮಾರಸ್ವಾಮಿ ಗುಡುಗಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img